Monday, April 18, 2011

ಆರಂಬಕಾರ

ಹಗಲಿರುಳು ನೆರಳುನಿದ್ದೆಯ ಮೆಟ್ಟಿ, ಹೊಟ್ಟೆಬಟ್ಟೆಯ ಕಟ್ಟಿ,
ಸುಖಸನ್ಮಾನಗಳಿಗಾಶಿಸದೆ, ಜಾತಿಮತಗಳ ಭೇದವೆಣಿಸದೆ
ಜಗದೆಲ್ಲರ ಹಸಿವಾಗ್ನಿಯ ತನ್ನ ಬೆವರಿಂದ ನಂದಿಸುವಾತ
ಪರಮಪೂಜ್ಯ ಶ್ರೀಸಾಮಾನ್ಯನಲ್ಲವೆ? ಈ ಅನ್ನಧಾತ;

ಅನ್ಯಜೀವಿಗಳನ್ಯವೆನ್ನದೆ ಬಳಗದೊಳಕೂಡಿ ಬಾಳೊ ಬುದ್ದ
ಕಲ್ಮಣ್ಣಲೂ, ಗಿಡಮರದಲೂ ಪ್ರತ್ಯಕ್ಷ ದೇವರ ಕಾಣೊ ಸಿದ್ದ
ನೇಗಿಲಕೆಲಸದಿ ಕೈಲಾಸವ ಕಾಣೊ ಕರ್ಮಯೋಗಿ
ಭುವಿಯಲುತ್ತಮ ಧರ್ಮಿಷ್ಠನಲ್ಲವೆ? ಈ ನೇಗಿಲಯೋಗಿ;

ನೇಗಿಲಿಡಿದು ಜೀವಂತ ಚಿತ್ತಾರ ಬಿಡಿಸೊ ಭೂಚಿತ್ರಕಾರ
ನಿಸರ್ಗದ ಮಿಡಿತಕ್ಕನುಸಾರ ಉಸಿರಾಡೊ ಹಾಡುಗಾರ
ಕಸದಿಂರಸವ, ಮಣ್ಣಿಂದನ್ನವ ಸೃಷ್ಟಿಸಬಲ್ಲ ಜಾದುಗಾರ
ಗಂಧದೆದೆಯ ಜೀವನಕಲಾವಲ್ಲಭನಲ್ಲವೆ? ಈ ಆರಂಬಕಾರ;

ಹಸಿವಿಗಿಂತ ನರಕಶಿಕ್ಷೆಯಿಲ್ಲ, ಅನ್ನಧಾತನಿಗಿಂತ ಧಾತನಿಲ್ಲ
ಇವನಿಲ್ಲದೆ ಜಗನೆಡೆಯದೊ, ಇವನೆಡೆಗೆ ಭಕ್ತಿ ತೋರೊ;
ಅನ್ನ ನೀಡುವ ಕೈ ಸಣಕಲಾದರೆ, ಜಗವೆ ಬಡಕಲು ತಿಳಿಯೊ
ಇವನಳಿವಲಿ ಮನುಕುಲದಳಿವಡಗಿದೆ, ಇದನರಿತು ಬಾಳೊ;

8 comments:

  1. Math: Jai Ho ಅನ್ನಧಾತ, Jai Ho ಗೌಡ್ರೆ:)

    ReplyDelete
  2. I like it...super... and thanks!

    ReplyDelete
  3. @Shami - Thanks for liking.. but why you are saying thanks?

    ReplyDelete
  4. ಅದ್ಭುತ ಕವನ ಗೌಡ್ರೆ.. super like!!

    ReplyDelete
  5. ತೋಟೇಗೌಡರೇ...ಅನ್ನದಾತನ ಸ್ಟ್ರಾಂಗ್ ಸಪೋರ್ಟರ್ ನಾನು ಸಹಾ...ಅನ್ನ ನೀಡೋ ಎಷ್ಟೋ ಜೀವಗಳು ಸಾಲದಹೊರೆಯಲ್ಲಿ ಒದ್ದಾಡುವುದು ನಿಜಕ್ಕೂ ಶೋಚನೀಯ...
    ಚನ್ನಾಗಿದೆ ಕವನ..

    ReplyDelete
  6. ಧನ್ಯವಾದಗಳು ಜಲನಯನ ;)

    ReplyDelete