Friday, May 27, 2011

ಓ ಗೋಮುಖವ್ಯಾಘ್ರಗಳೆ ಕೇಳಿ


ಬಿಡುವಿಲ್ಲದೆ ಬೆವರ ಬೆರೆಸಿ ನಾ ದುಡಿದನ್ನವನುಂಡು
ಬದುಕ ನೀಡಿದ ಈ ಬಡವನುಡುಗೊರೆಯ ಮೆಚ್ಚಿಕೊಂಡು
ನನಗೇ ಅಸ್ಪೃಶ್ಯನೆಂಬ ಬಿರುದಿಟ್ಟು ಋಣ ತೀರಿಸಿರುವ

ಇಲ್ಲಸಲ್ಲದ ಸ್ವಕಾರ್ಯಸಿದ್ದಿ ಧರ್ಮವ ಮೇಲೆತ್ತಿ
ಏನೂ ಅರಿಯದ ಮತಿಗೆ ಮೂಮಸಿಯ ಮೆತ್ತಿ
ನಾ ಬೆಳೆದನ್ನಕೆ ನನ್ನನ್ನೆ ಭಿಕ್ಷುಕನನ್ನಾಗಿ ಮಾಡಿರುವ

ವಿದ್ಯಾಬುದ್ಧಿಯಾರ್ಜನೆಯಿಂದ ನಯವಾಗಿ ವಂಚಿಸಿ
ಸಕಲ ಸುಖಸನ್ಮಾನಗಳಿಂದ ಸದಾ ದೂರವಿರಿಸಿ
ನನ್ನ ದಣಿವಿನುರಿಯಲ್ಲಿ ನಿಮ್ಮ ಬೇಳೆ ಬೇಯಿಸುತಿರುವ

ಓ ಗೋಮುಖವ್ಯಾಘ್ರಗಳೆ ಇನ್ನಾದರೂ ಸಾಕುಮಾಡಿ
ಕುಳಿತ ಕೊಂಬೆಗೆ ಕೊಡಲಿ ಹಾಕುವ ದುರ್ನಿಪುಣತೆ
ಹಾಲಿಗಾಗಿ ಗೋವಿನ ಕೆಚ್ಚಲು ಕುಯ್ಯುವ ದುರ್ನಡತೆ

ನನ್ನ ಧಿಕ್ಕಾರವಿದೆ ನಿಮ್ಮ ಅಂಧರ್ಮದ ಕುತಂತ್ರನೀತಿಗೆ
ನೇರ ಉತ್ತರವಿದೆ ನಿಮ್ಮ ಸಹಿಸಲಸಾಧ್ಯ ಹುಂಬದರ್ಪಕೆ
ನ್ನು ಸಲ್ಲದು ನಿಮ್ಮ ಭಗವಂತನಾಮ ಭಯೋತ್ಪಾದನೆ

14 comments:

 1. ಅತ್ಯುತ್ತಮ ಅಮೋಘವಾದ ಕವನ..

  ನಿಜವಾಗಿಯೂ ಈ ಭ್ರಷ್ಟಾಚಾರಿಗಳು, ದೇಶವನ್ನೇ ನುಂಗಿ ಕೊಳ್ಳೆ ಹೊಡೆದು ತಮ್ಮ ಹೊಟ್ಟೆ ತುಂಬಿಸಿ ಕೊಂಡಿದ್ದಾರೆ... ದೇಶದ ಬೆನ್ನಲೆಬು, ಒಬ್ಬ ರೈತನ ಭಾವನೆ, ಕೋಪವನ್ನ ಚೆನ್ನಾಗಿ ನಿರೂಪಿಸಿದ್ದಿರಾ.

  ಒಂದು ಸಣ್ಣ ಅನಿಸಿಕೆ. ಮೊದಲ ಮೂರು ಚರಣ, ಕೊನೆಯ ಸಾಲುಗಳಲ್ಲಿ - "ತೀರಿಸಿರುವೆ", "ಮಾಡಿರುವೆ, "ಬೇಯಿಸಿರುವೆ" ಎಂದು ಬರದೆರೆ ಇನ್ನು ಸುಂದರವಗಿರುವುದು. ಅನ್ಯಥಾ ಅರಿಯಬೇಡಿ.

  ನಿಮ್ಮ ಬರಹ ಇನ್ನು ಚೆನ್ನಾಗಿ ಅರಳಲಿ ಎಂದು ಆಶಿಸುವೆ.

  ಇಂತಿ,
  ಸುನಿಲ್.

  ReplyDelete
 2. Thanks a lot Paddy. my last few posts were missing your comment.. Now i'm happy. yeah.. about that "VA vs VE", i thought a lot and decided to go with "VA". will change it.

  ReplyDelete
 3. ಗೌಡ್ರೆ, ಬಂಡಾಯ ಕವಿಗಳಾಗ್ತಿದ್ದೀರಿ..
  ಮೊದಮೊದಲು ಪ್ರೇಮ ಕವಿಯಾಗಿದ್ರಿ ಈಗ ಏನೋ ಬಂಡಾಯದ ಕಡೆಗೆ ಒಲವು ಮೂಡಿದೆ.. ಏನು ಕಾರಣ?? ;)
  ಕವಿತೆ ಚೆನ್ನಾಗಿದೆ .. :)

  ReplyDelete
 4. "ಹಾಲಿಗಾಗಿ ಗೋವಿನ ಕೆಚ್ಚಲು ಕುಯ್ಯುವ ದುರ್ನಡತೆ"-- indeed heart touching ..
  Your thoughts very beautifully explained and reflected..
  Good one Thote:)
  Keep it going on..:)

  ReplyDelete
 5. @ನವೀನ್: ಬಂಡಾಯ ಏನಿಲ್ಲ... ನಾನು ಒಬ್ಬ ರೈತನ ಮಗನಾಗಿ, ರೈತರ ಪರಿಸ್ತಿತಿಯ ಅನುಭವ ಇದ್ದುದ್ದರಿಂದ, ಅನಿಸಿದ್ದನ್ನು ಬರೆದೆ ಅಷ್ಟೆ.

  ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.

  ReplyDelete
 6. @ರಶ್ಮಿ: ಧನ್ಯವಾದಗಳು.... ನೀವು ಈಗೆ ಓದ್ತಾ ಇರಿ.

  ReplyDelete
 7. Math: Super like Gowdre:)

  ReplyDelete
 8. Another fantastic kavana. The humiliation, the hard work that goes in and the tough times that they have to go through is very well put in. Really very touching..

  ReplyDelete
 9. Sounds Awesome :)

  I understood from some comments that its related to the greedy politicians of our country...
  Expecting more of such poems from you...

  Ronnie

  ReplyDelete
 10. Thanks you Ronnie.. for taking time to look in to, even though you can't read kannada.

  ReplyDelete
 11. dude I can read kannada. just that sometimes I dont understand what I read.. in your case I understand nothing..:)

  ReplyDelete