Tuesday, August 24, 2010

ಅಕ್ಕ-ತಂಗಿ


ಎಲ್ಲಾ ಮಹಾಮತಿಯರಸರ ಹಾಗೆ ವಿಷಯದಾಳ ಅರಿಯುವ ಬದಲಾಗಿ
ತರಾತುರಿಯಲಿ ಅವರವರ ಜೊಳ್ಳು ಆದರ್ಶಭರಿತ ತಕ್ಕಡಿಯಲಿ ತೂಗಿ
ಉಳಿದ ಹಾಳೂರಿನ ಗೌಡನಂತೆ ಇಲ್ಲಸಲ್ಲದ ಹಳಸು ತೀರ್ಪು ನೀಡದೆ
ತಾಸುಗಟ್ಟಲೆ ಜೊತೆಯಲ್ಲಿ ಸುಮ್ಮನೆ ಕೂತು ಒರಗಲು ಹೆಗಲು ಕೊಟ್ಟು
ತಾಯಿ ತನ್ನ ಮಗುವಿನ ಮೊದಲ ತೊದಲು ನುಡಿಗಳನ್ನು ಆಲಿಸಿದಂತೆ
ಯಾರಿಗೂ ಹೇಳಲಾಗದ ಕಷ್ಟಕಾರ್ಪಣ್ಯಗಳ ಪಟ್ಟಿಯನ್ನು ಹೃದಯವನ್ನರಳಿಸಿ ಕೇಳಿ
ಮರುಮಾತಡದೆ ಮೂಕನೋಟದಲೆ ತರ್ಕ ಮಾಡಿ ದುಗುಡವನ್ನೋಡಿಸಿ
ತಲೆಹೋಗುವಂತದ್ದೇನು ನಡೆದೇ ಇಲ್ಲವೆನ್ನುವಂತೆ ಮೊಗವರಳಿಸಿ ನಸುನಗುತ್ತ
ಅಕ್ಕರೆಯಿಂದ ತನ್ನೆದೆಗವಚಿ ಸೆರಗಿನಿಂದ ಮೋರೆಯ ದಣಿವನ್ನೊರೆಸುತ್ತ
ತಲೆಯನ್ನು ನೇವರಿಸಿ ಹಣೆಗೆ ಮುತ್ತಿಟ್ಟು ಈ ಹಾಳು ಜೀವನವೇ ಇಷ್ಟೆಂದು ತಿಳಿಹೇಳಿ
ಮುದುಡಿದ ಮನಸನ್ನು ಗಾಳಿಪಟ ಮಾಡಿ ಹಾರಿಸಿದವಳು ನೀನೇ... ನನ್ನ ಅಕ್ಕಯ್ಯ...

ಸರಿತಪ್ಪುಗಳ ಆತ್ಮವಿಮರ್ಶೆ ಮಾಡಿಕೊಳ್ಳಲು ಕೂಡ ಸಿಗದೇ ಪುರುಸೊತ್ತು
ಯಾಂತ್ರಿಕವಾಗಿರುವ ಕರ್ಮಗಳ ಅರ್ಥಗರ್ಭಿತ ಧ್ಯೇಯಗಳೆಲ್ಲಾ ಸತ್ತು
ಈ ಬದುಕಿನ ಅವಿರತ ಅಸಂಖ್ಯ ಜಂಜಾಟಗಳ ತುಲನೆಯಿಂದ ಬೇಸತ್ತು
ಈ ಬದುಕು ಕವಲುದಾರಿಯಲ್ಲಿ ಸಾಗುತಿರುವ ವ್ಯಥೆಯ ಶಿಖರದಲ್ಲೇ ಇದ್ದರೂ
ಭರಸಿಡುಕಿನ ಸಾಗರದಲ್ಲೇ ಇದ್ದರೂ, ಭಾವದಭಾವದ ಮರುಭೂಮಿಯಲ್ಲೇ ಇದ್ದರೂ
ನಿನ್ನ ಅಂತರಾಳದಲ್ಲಿ ಮೂಡಿದ ನಗುವಿನ ಕಿರಣಗಳು ಸೋಕಿದರೆ ಸಾಕು
ಆ ಪುಟ್ಟ ತೋಳುಗಳ ಮನಸಾರೆ ಆಲಿಂಗನದ ಸ್ಪರ್ಶ ತಾಕಿದರೆ ಸಾಕು 
ಸಿಡುಕಿನ ಭಾರೀ ಮಂಜುಗಡ್ಡೆ ಕರಗಿ ಅನುರಾಗದ ಪನ್ನೀರಾಗಿ ಹರಿದು
ನನ್ನೆದೆಯ ಭಾವನೆಗಳ ಕೆರೆಯು ತುಂಬಿ ಒಲವಿನ ಕೋಡಿ ಸುರಿದು
ಹೃದಯದ ಬಯಲಿನ ತುಂಬೆಲ್ಲಾ ಸೊಂಪಾದ ಪ್ರೀತಿಯ ಫಸಲು ಬೆಳೆದು
ಸಾಗುತಿರುವ ಈ ಬಾಳ ದಾರಿಯ ಹಚ್ಚಹಸುರಾಗಿಸಿದವಳು ನೀನೇ... ನನ್ನ ತಂಗ್ಯವ್ವ...

ಭರ ಭರನೆ ದೊಡ್ಮನುಷ್ಯನಾಗುವ ಹುನ್ನಾರದ ತುರಗವನ್ನೇರಿ
ದೊಡ್ಡ ದೊಡ್ಡ ಕನಸುಗಳ ಸಾಕಾರದ ಅಶ್ವಮೇಧಯಾಗಕೆ ಹೊರಟು
ನನಗರಿಯದೆ ನನ್ನೊಳಗಿನ ಹುಡುಗಾಟಿಕೆಯ ಎಳೆಮನದ ಗಿಣಿಯ
ಗೊಡ್ಡು ಗುರಿಗಳ ಸರಳುಗಳ ಹಿಂದೆ ಮುಲಾಜಿಲ್ಲದೆ ಬಂದಿಯಾಗಿಸಿರುವೆ
ಆ ನಿರಪರಾಧಿ ಅತಂತ್ರ ಗಿಳಿಯ ಚಣಕಾಲವಾದರೂ ಸ್ವತಂತ್ರಗೊಳಿಸಿ
ಜೊತೆಯಲಿ ಸ್ವಚ್ಛಂದ ಬಾನಿಗೆ ಹಾರಿಸಿ ಸ್ವೇಚ್ಛ ಚಿತ್ತಾರ ಬಿಡಿಸಬಲ್ಲವರು ನೀವೇ;
ಹುಣ್ಣಿಮೆಯ ರಾತ್ರಿಯಲಿ ಪ್ರೀತಿಯ ಕಣ್ಮುಚ್ಚಿ ಸಾಗುತಿದ್ದ ಈ ಹುಂಬನಿಗೆ
ಪ್ರೀತಿಯ ಒಳಗಣ್ಣ ತೆರೆಸಿ, ಬೆಳದಿಂಗಳ ಸೌಂದರ್ಯ ತೋರಿಸಿ
ತೋಚಿದ ದಾರಿಯಲಿ ಸಾಗುತಿದ್ದ ನನಗೆ ಉತ್ತಮ ದಿಕ್ಕನ್ನು ಸೂಚಿಸಿ
ನಾಲ್ಕು ದಿನದ ಬಾಳಲಿ ಪ್ರೀತಿಯ ಕೊಟ್ಟುಣ್ಣುವುದರ ಅರಿವು ಮೂಡಿಸಿ
ಬಾಳ ಧಗೆಯ ಪಯಣದಲಿ ತಂಬೆಲರಂತೆ ಜೊತೆಗಿರುವವರು ನೀವೇ... ನನ್ನ ಸೋದರಿಯರೆ... 

// ಪ್ರೀತಿಯ ಸೋದರ

16 comments:

 1. Thanks bro for d lovely poem

  ReplyDelete
 2. Math:
  Nice Gowdre. Beautiful poem dedicated to Sisters on the great day: Raksha bandhana.

  ReplyDelete
 3. ಸೂಪರ್ ಕವನ ಗೌಡ್ರೆ.
  ಐಯ್ ಲಯ್ಕ್ದ್ ದಿ ಪೋಎಮ್ ವೆರಿ ಮಚ್.

  ReplyDelete
 4. ರೊನ್ನಿ - ಥ್ಯಾಂಕ್ಸ್ ಎ ಲಾಟ್ ಮ್ಯಾನ್ ;)

  ReplyDelete
 5. Its wonderful feeling to have a sister in life. If you are asking - what is so spl about it? As I always say - to understand it you should have a sister...
  And gowdre, the poem you have written, is one of your best work so far. And I consider this poem to be one of the best poem written for sisters that I have ever read till now. Good job and keep them coming..

  Note: I feel a bit sad, that the people for whom you have written this poem may not understand the intense Kannada language used in this poem.. Atleast one of them ;) Anyways... they can contact Naveen Y to translate it to English :P

  ReplyDelete
 6. Thanks a lot paddy for liking my poem... yeah sister is a beautiful relation in life, that inspired me to put it my own words..

  Yes, She will not understand completely.. may be somebody should help her.. ;)

  ReplyDelete
 7. What a beautiful and meaningful gift you can give on Raksha Bhandhan!!! Thanks a tonnes dear bro..

  Was speachless while reading this.. not coz I did not understand :) but for the way you have expressed your intense feelings with your intense Kannada :)
  Best of my wishes always go with you.

  Also, congratulations on the anniversary of this blog of yours!!! Great work..

  (And yes, had to take help in few places to understand though ;) )

  ReplyDelete
 8. @Sumi: Glad that you liked it. hope that you both don't ask any other costlier gifts for rakhi?

  ReplyDelete
 9. @ Sumi akka and Supriaya: Don't leave him... I agree this is a good way of expressing feelings.. but..

  Buiznesh izz Buiznesh :P

  Demand costly gifts for your rakhi..

  @ Gowdru: Wow you completed 1 year being a blogger.. great... that certainly calls for a party :P he he.. but no burgers this time please... ;)

  ReplyDelete
 10. @Paddy: My sisters are sweet.. they don't like buiznesh...

  One year - Yeah, with around 23 posts in one year.. not a bad start.. :)

  ReplyDelete
 11. ಗೌಡ್ರೆ, ಕವನ ತುಂಬಾ ಚೆನ್ನಾಗಿದೆ!!
  ಪದ ಪ್ರಯೋಗಗಳು ಮಜಾ ಕೊಡ್ತಿವೆ.
  ನಿಮ್ಮ ಬ್ಲಾಗಿಗೆ ಹುಟ್ಟು ಹಬ್ಬದ ಶುಭಾಶಯಗಳು, ನಿಮಗೆ ಅಭಿನಂದನೆಗಳು :)
  ಪ್ರೇಮ, ಪ್ರೀತಿ, ಕನಸಿನ ಕನ್ಯೆ ಮೇಲೆ ಮೊದಲು ಕವನಗಳು ಶುರು ಮಾಡಿದ ನೀವು ಈಗ ಬೇರೆ ವಿಷಯಗಳ ಬಗ್ಗೆ ಬರಿಲಿಕ್ಕೆ ಶುರು ಮಾಡಿದ್ದೀರಿ.
  ನಿಮ್ಮ versatality ತೋರಿಸ್ತಾ ಇದ್ದೀರಿ..!! ನಮಗೆಲ್ಲ ಪ್ರತಿ ಸಾರ್ತಿನೂ ಒಂದು ಹೊಸ ಅಚ್ಚರಿ ಕೊಡ್ತಾ ಇದ್ದೀರಿ..
  ಹೀಗೆ ಬರೀತಿರಿ..ನಾವು ಓದಿ ಮಜಾ ತೊಗೊಳ್ತೀವಿ :)
  ಅಂದಹಾಗೆ ಬ್ಲಾಗ್ ವಾರ್ಷಿಕೋತ್ಸವದ ಪಾರ್ಟಿ ನಾನು ಅಲ್ಲಿಗೆ ಬಂದ ಮೇಲೆ ಇಟ್ಕೊಳ್ಳಿ ;)

  @ಸುಮಿತ್ರಾ, ಸುಪ್ರಿಯ: ನೀವು ಬೇರೆಯೇನು gift ಕೇಳಬಾರದು ಅಂತ ಬೆಣ್ಣೆ ಹಚ್ತಾ ಇದ್ದಾರೆ ಹುಷಾರು... :)

  ReplyDelete
 12. You can't escape from that thote.. This is of course is a wonderful way to express ur self. But we want our other gift as well..

  ReplyDelete
 13. @ನವೀನ: ಆತ್ಮೀಯ ದನ್ಯವಾದಗಳು... ನನಗೂ ಕೂಡ ಪದಗಳ ಜೊತೆ ಆಡಲಿಕ್ಕೆ ತುಂಬ ಮಜಾ ಬರ್ತಿದೆ. ನಿಮ್ಮಗಳ ಪ್ರೋತ್ಸಾಹ ಈಗೆ ಇದ್ದರೆ ನಾನೂ ಕೂಡ ಈಗೆ ಬರೀತ ಇರ್ತೇನೆ.

  @ಸುಮಿತ್ರ: ಸುಪ್ರಿಯಳ ನೋಡಿ ಕಲಿ, ಅವಳು ಏನೂ ಕೇಳಲೇ ಇಲ್ಲ ;)

  ReplyDelete
 14. ಜೀವನದಲ್ಲಿ ಪ್ರೀತಿಸುವ ಅಕ್ಕ ತಂಗಿಯರು ಇರುವ ನಾವೇ ಧನ್ಯರು. ಇವರ ಪ್ರೀತಿಗೆ ಸಮನಾದ ಪ್ರೀತಿ ಇನ್ನೊಂದಿಲ್ಲ. ಕವನ ಓದುತಿರುವಾಗ ನನಗೆ ನನ್ನ ಅಕ್ಕಂದಿರ ನೆನಪಾಯಿತು. ಚಿಕ್ಕಂದ್ದಿದಾಗ ಮಾಡುತಿದ್ದ ಆ ಗಲಾಟೆ ಆ ತಮಾಷೆ ನಾನು ಮಿಸ್ ಮಾಡುತಿದ್ದೇನೆ. ಯಾಂತ್ರಿಕವಾದ ಈ ಪಯಣದಲ್ಲಿ ಇವರ ಪ್ರೀತಿ ಪ್ರೋತ್ಸಾಹನೆ ನಮಗೆ ಹೊಸ ಉತ್ಸಾಹವನ್ನು ತರತದೆ. ತಮ್ಮ ಪ್ರೀತಿಯ ಆಳ ಎ ಕವನದಿಂದ ಗೊತ್ತಗುತದೆ. ನಿಮ್ಮ ಪ್ರೀತಿ ಸದಾ ಕಾಲ ಹಸುರಾಗಿ ಇರಲಿ..

  ReplyDelete