Friday, September 17, 2010

ಪ್ರೇಮೋದಯಎದೆಬಡಿತದ ಗತಿಯೇಕೋ ಇಂದು ಮಿತಿಮೀರುತಿದೆ
ಬರಡು ಬಾಳಲಿ ಒಲವಿನ ಸುರಿಮಳೆಯಾಗುವ ಮುನ್ಸೂಚನೆಗೊ?
ಇಷ್ಟು ದಿವಸ ಮಾಡಿದ ಪ್ರೀತಿಯ ಜಪತಪಗಳ ಮೋಡಿಗೆ
ಮನಸೋತ ಮನದ ಮೆರವಣಿಗೆಯಾಗಮನದ ದಿಕ್ಸೂಚನೆಗೊ?
ನೂರಾರು ಗುರುಗಳಿಂದ ಕಲಿತ ನಾಲ್ಕಾರು ಪದಗಳು ನಿನ್ನ ಕಂಡೊಡನೆ
ಭಾವ ಹೊತ್ತು, ಸಾಲಾಗಿ ನಿಂತು, ಕಟ್ಟುವ ಗೀತಗರ್ಭದ ಶುಭಸೂಚನೆಗೊ?

ತನುವಿಗೆ ವಯ್ಯಾರದ ಸೀರೆಯುಟ್ಟು, ಎದೆಗೆ ಒಲವಾಭರಣ ತೊಟ್ಟು,
ಮೋರೆಗೆ ಲಜ್ಜೆಯಲಂಕಾರ ಮಾಡಿ ಪ್ರತಿರಾತ್ರಿ ಕನಸಲಿ ಕಾಡುವ ಕನ್ನಿಕೆಯೇ
ಸ್ವಪ್ನಮೇಘಮಾಲೆ ಹಿಡಿದು ಕಾದಿರುವೆ, ಸುರಿಸಲು ಒಲವಿನ ಜಡಿಮಳೆ
ತಣಿಯಲು ತಯಾರಿ ಮಾಡಿಕೊ, ಅನುರಾಗದ ಬೊಗಸೆಯೊಡ್ಡಿ;
ಮುಟ್ಟಿದರೆ ಸಾಕು ಮುಟ್ಟಾಗದ ತುಂಬು ಮೊಗ್ಗು ನೀನು; 
ಮುಟ್ಟದಯೆ ಪರಾಗಸ್ಪರ್ಶ ಮಾಡಬಲ್ಲ ತುಂಟ ದುಂಬಿ ನಾನು; 

ನಡೆಯುತಿರೆ ನಿನ್ನ ಸಂಗಡ, ಮುಸ್ಸಂಜೆ ಹೊತ್ತಿನಲಿ
ಪಿಸುಮಾತಿನ ಸುಳಿವು ನೀಡಿ ಸೆಳೆಯುತಿರುವೆ ಸನಿಹಕೆ;
ನಿನ್ನ ನಡುವೇರಿ ಕುಳಿತಿದೆ ಈ ನನ್ನ ಕೈ ಕೇಳದೆ ಯಾರ ಮಾತು
ಕೇಳದೇನೆ ಹಾಕಿರುವೆ ಒಪ್ಪಿಗೆಯ ಸಹಿ, ನೀನೂ ಹುಸಿಗೋಪದಲಿ;
ಸಂಜೆ ತಂಗಾಳಿಯ ಮಾತು ಕೇಳಿದ ನಿನ್ನಯ ನೀಳ ಕೇಶರಾಶಿ
ನನ್ನಯ ಕೆನ್ನೆಗೆ ಚುಂಬಿಸಿ, ಕಂಪಿನ ಮತ್ತೇರಿಸಿ, ಮಾತನ್ನೆ ಮರೆಸಿದೆ;

ಕುಳಿತಿರೆ ನಿನ್ನ ಸನಿಹದಲಿ, ಸಾಗರದ ತೀರದಲಿ
ಬಾರದು ಎಂದೂ ಅಭಾವ ಈ ಕವಿ ಕಲ್ಪನೆಯ ಮೇವಿಗೆ
ತೀರದು ಮೂಕಮನಗಳ ನಯನ ಸಂಭಾಷಣೆಯ ದಾಹ;
ನಮ್ಮ ಪ್ರೇಮೋದಯವ ಕಂಡ ಆ ದಿನಕರನು  
ಕರುಬಿ ಕಿಚ್ಚಿನ ಕೆಂಡ ಕಾರಿ ಮುಗಿಲನೆ ಕೆಂಪೇರಿಸುತಿಹನು
ಜೋರಾಗಿ ಜಾರುತಿಹನು ಮುಳುಗಿ ಮರೆಯಾಗಲು;

16 comments:

  1. Tumbane chennagide gowdre... anda haage recently yavattadru yaarjotenadru beech ge hogidra..? :) ;) :P

    ReplyDelete
  2. @padiyar - Thanks for the comment. illa kano, beach kade hogi thumbaane dinagalu aythu.:(

    ReplyDelete
  3. ಗೌಡ್ರೆ ನೀವು ಬೇಗ ಮದುವ ಮಾಡಿಕೊಳ್ಳಿ . ನೀವು ಬೌಂಡರಿ ಲೈನ್ ಹತ್ತಿರ ಇದ್ದೀರಾ , ಕ್ಯಾಚ್ ಹಿಡಿದು ನಿಮ್ಮವರನ್ನು ಬೇಗ ಔಟ್ ಮಾಡಿ. ನಿಮ್ಮ ಕವನ ಓದಿದರೆ ಹುಡಿಗಿ ಕಡಇಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಅನಿಸುತಿದೆ. ಬೇಗ ಮಾಡುವೆ ಊಟ ಹಾಕಿ....

    ReplyDelete
  4. Beech ge hogilla, but manege recently hogi bandiddane. En vishya Thote..
    Very romantic kavana written in simple words put together very nicely.
    And moreover, I too am learning appata Kannada this way :)

    ReplyDelete
  5. " ಇಷ್ಟು ದಿವಸ ಮಾಡಿದ ಪ್ರೀತಿಯ ಜಪತಪಗಳ ಮೋಡಿಗೆ ಮನಸೋತ ಮನ "

    ಈ ವಾಕ್ಯದ ಬಗ್ಗೆ ಹೆಚ್ಚಿನ ವಿವರ ಬೇಕಾಗಿದೆ, ದಯವಿಟ್ಟು ತಿಳಿಸಿ.

    ReplyDelete
  6. @ಕೆಪಿ & @ಸುಮಿ: ದನ್ಯವಾದಗಳು
    @ಮಚ್ಚಾ: ಹೆಚ್ಚಿಗೆ ವಿವರಗಳು ಯಾವುದು ಇಲ್ಲ. ಯಾರಾದರೂ ಸಿಕ್ಕಾಗ ತಿಳಿಸ್ತೇನೆ.

    ReplyDelete
  7. Math: Nice gowdre...
    Kavana odida mele, ellru preetiyalli ಜಾರುtare..

    ReplyDelete
  8. @Math: Thanks, ಯಾರು ಜಾರುತಾರೋ ಇಲ್ಲವೋ ಗೊತ್ತಿಲ್ಲ, ಆದ್ರೆ ನೀವಂತು ಜಾರಿ ಆಗಿದೆ... ಮಜಾ ಮಾಡಿ

    ReplyDelete
  9. ಗುಡ್ ಒನ್ ಗೌಡ್ರೆ .... ಗೌಡ್ತಿ ಅವರಿಗೆ ಹೇಳಿ , ಮದುವೆ ಊಟಕ್ಕೆ ಜನ ಕರ್ನಾಟಕದ ಮೂಲೆ ಮೂಲೆ ಇಂದ ಬರ್ತಾರೆ ಅಂತ .... ;)

    ReplyDelete
  10. @ವಿಶ್ವ: ದನ್ಯವಾದಗಳು.. ನನ್ನ ಮದುವೆಗೆ ಸರ್ವರಿಗೂ ಸ್ವಾಗತ ಇರುತ್ತೆ.

    ReplyDelete
  11. ಗೌಡ್ರೆ,
    ಪ್ರೆಮೋದಯ ವಾಯ್ತ? ಜಪತಪ ಫಲಿಸ್ತಾ?
    ಈಗ ನಿಮ್ಮ ಹೃದಯದಲ್ಲಿ ಈ ಉದಯಿಸಿದ ಪ್ರೇಮದ ಕಾರಣಕರ್ತರು ಯಾರು ಅಂತ ಹೇಳಿ... :)
    ಗದ್ದಲ ಚೆನ್ನಾಗಿದೆ.. ನಿಮಗ್ಹೆಂಗೂ ಮಜಾ ಬರ್ತಿರಬೇಕು.. ಜೊತೆಗೂ ನಮಗೂ ಮಜಾ ಬರ್ತಾ ಇದೆ.
    ಯಾಕಂದ್ರೆ, ನಿಮ್ಮ ಗದ್ದಲ ಓದಲಿಕ್ಕೆ ಚೆನ್ನಾಗಿರತ್ತೆ.. ಗದ್ದಲದ ಕಾರಣ ಯಾರು ಅಂತ ಗೊತ್ತಾದ್ರೆ ಇನ್ನೂ ಮಜಾ ಬರಬಹುದು ಅನ್ಸತ್ತೆ

    ReplyDelete
  12. @ನವೀನ: ಗದ್ದಲ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು. ಗದ್ದಲ ನನ್ನ ಕಲ್ಪನೆಯ ಕೃಷಿ.

    ReplyDelete
  13. ಮುಟ್ಟಿದರೆ ಸಾಕು ಮುಟ್ಟಾಗದ ತುಂಬು ಮೊಗ್ಗು ನೀನು;
    ಮುಟ್ಟದಯೆ ಪರಾಗಸ್ಪರ್ಶ ಮಾಡಬಲ್ಲ ತುಂಟ ದುಂಬಿ ನಾನು;

    wah rey wah!!! ;-)

    ReplyDelete
  14. WOw!!! Thote.. superb!!! kannada da nava kavigala list nalli serbodu neevinnu...

    Adre idu kalpane indane bardaddu anta vaadisi prayojana illa.. spoorti irlebeku alva :-)

    elli meet aadri nimma "Kanasinalli kaduva kannike" yanna?

    ReplyDelete
  15. @ಶ್ರೀಲಕ್ಷ್ಮೀ: ಕವನ ಓದಿ, ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು.
    ನಾನು ಕೂಡ ಕನಸಲಿ ಕಾಡುವ ಕನ್ನಿಕೆಯ ಕಾಣಲು ಕಾತುರದಿಂದ ಕಾಯುತಿದ್ದೇನೆ;). ಸಿಕ್ಕಾಗ ತಿಳಿಸುತ್ತೇನೆ.

    ReplyDelete