Tuesday, June 8, 2010

ಅವ್ವಾ
ಧರಣಿಗೆ ಎಂದಾದರೂ ತೀರಿಸಲಾದೀತೆ ರವಿಯ ಋಣವ
ಮೀನಿಗೆ ಬಹುಕಾಲ ಬದುಕಲಾದೀತೆ ನೀರನು ಧಿಕ್ಕರಿಸಿ
ಹೆಮ್ಮರವೇ ಆದರೂ ಅರೆಕ್ಷಣ ಮರೆಯಲಾದೀತೆ ಧರೆಯಾಸರೆ
ನಿನ್ನ ಹೆಸರಿಲ್ಲದ ನನ್ನ ಉಸಿರು ಕೊನೆಯುಸಿರಾಗಲಿ ಕಣವ್ವ

ನನ್ನೆದೆ ತೋಟದ ಪ್ರೀತಿಯ ಹಸುರಿನ ಹೊನಲು ನೀನವ್ವ
ನನ್ನ ಮನದ ಮುಗಿಲಲಿ ಉದಯಿಸುವ ಬೆಳಕಿನ ಕಿರಣ ನೀನವ್ವ

ದೇವರೇ ಲಂಚಕ್ಕೆ ಕೈಯೊಡ್ಡುವ ಈ ಭ್ರಷ್ಟ ನಾಡಲಿ
ನಿಸ್ವಾರ್ಥ ಸಿಗುವ ಏಕೈಕ ತಾಣ ನಿನ್ನೆದೆಗೂಡು ಕಣವ್ವ
ಮಾನವರೆಲ್ಲಾ ದಾನವರಾಗಿರೊ ಈ ದುಷ್ಟ ನಾಡಲಿ
ನೆಮ್ಮದಿ ಸಿಗುವ ಏಕೈಕ ತಾಣ ನಿನ್ನೊಡಲು ಕಣವ್ವ

ಯಾರ ಮನೆಯಲ್ಲಾದರು ಹಬ್ಬದಡಿಗೆ ಮಾಡಿದ್ದರೆ ಸಾಕು
ಹೊಂಚಾಕಿ ಬೇಡಿ ಪಡೆದು, ಸೆರಗಿನಲ್ಲಿ ಬಚ್ಚಿಟ್ಟು ತಂದು
ನನಗೆ ತುತ್ತಿಟ್ಟು, ತಾನು ಮಾತ್ರ ಬರೀ ಹೊಟ್ಟೆಯಲಿ ಮಲಗಿ
ಮಗ ಬೆಳೆದು ದೊಡ್ದಮನುಷ್ಯನಾಗುವ ಕನಸು ಕಂಡ
ಜಗತ್ತಿನ ಅತೀದೊಡ್ಡ ಕರುಣಾಮಯಿ ತಿರುಕಿ ನೀನವ್ವ

ವರುಷಗಳಿಂದ ಇರುವುದೊಂದೇ ಸೀರೆ ನೀ ತೊಡುತಿದ್ದರೂ
ಕೂಲಿ ಮಾಡಿ, ನನಗೆ ಮಾತ್ರ ನವನವೀನ ಉಡುಪು ತೊಡಿಸಿ
ಕಾಲಾವಾದಿ ಬರಿಗಾಲಿನಲ್ಲಿ ಕಲ್ಲುಮುಳ್ಳು ನೀ ತುಳಿಯುತಲಿದ್ದರೂ
ತನ್ನ ತಾಳಿಯನ್ನೇ ಗಿರವಿ ಇಟ್ಟು, ನನ್ನ ಪಾದ ಸಂರಕ್ಷಿಸಿ
ಕಡುಬಡತನದಲ್ಲೂ ಕುಂದುಕೊರತೆಗಳನ್ನು ನೀಗಿದ ಸಿರಿವಂತೆ ನೀನವ್ವ

ಓದುವುದು ಬರೆಯುವುದು ನೀ ಅರಿಯದೆ ಇದ್ದರೂ
ತನ್ನ ಮಗ ಮಾತ್ರ ನಾಲ್ಕಕ್ಷರ ಕಲಿತೇ ತೀರಬೇಕು
ಕಲಿತು, ನಾಲ್ಕಾರು ಜನರ ಬಾಳು ಬೆಳಗಬೇಕು
ಎಂಬ ಧೃಡವಾದ ಹುಚ್ಚು ಹಂಬಲದ ಕಾರ್ಯಸಿದ್ಧಿಯಲ್ಲಿ
ತಪ್ಪು ತಪ್ಪು ಅಕ್ಷರಗಳನ್ನೇ ಮತ್ತೆ ಮತ್ತೆ ತಿದ್ದಿಸಿದ
ನನ್ನ ಪಾಲಿನ ಮರೆಯಲಾಗದ ಮೊದಲ ಗುರು ನೀನವ್ವ

ಉರಿಯುವ ಬಿಸಿಲಲಿ, ಕೊರೆಯುವ ಚಳಿಯಲಿ,
ಸುರಿಯುವ ಮಳೆಯಲಿ, ಹಗಲಿರುಳು ಬೆವರು ಹರಿಸಿ
ತನ್ನೆದೆ ಮೇಲಿಂದ ಕೆಳಗಿಳಿಸದೆ ಜೋಪಾನ ಮಾಡಿ
ನನ್ನನ್ನು ಕಾಪಾಡುವುದಕ್ಕೆ ನಿನ್ನ ಜೀವನ ಮುಡಿಪಿಟ್ಟ
ನನ್ನ ಬೆಳೆಸುವುದನ್ನೇ ನಿನ್ನ ಜೀವನದ ಗುರಿಯಾಗಿಸಿಟ್ಟ
ನೀನೊಬ್ಬಳೆ ನನ್ನೆದೆಯ ಗುಡಿಯಲ್ಲಿ ಪೂಜೆಗರ್ಹ ಅಧಿದೇವತೆ ಕಣವ್ವ

15 comments:

 1. Yes Goudre... It's True.
  The only one person who live for others is "Mother"

  ReplyDelete
 2. wow.. wonderful dedication to the most respected person of one's life!
  Beautifully woven words..

  ReplyDelete
 3. I don't want to comment on the poem... but I will surely comment on the feelings... ..

  ..just "Tremendously Fantabulous"... Hats off to every mother on this world...

  ReplyDelete
 4. Touched. Million thanks for reminding many things in my life. I was in my own world while going through these invaluable words. Hope everyone who comes through your life (or everyone's life) would understand the value of every word in this gadhla. Again, am touched with few instances above. Keep going!!!!!!!!!!

  ReplyDelete
 5. ಅಮ್ಮನ ಬಗ್ಗೆ ಎಷ್ಟು ಬರೆದರೂ ಸಾಲದು. ತಮ್ಮ ಭಾವನೆಗಳು ತುಂಬಾ ಚೆನ್ನಾಗಿ ಕವಿತೆಯಲ್ಲಿ ಕಾಣುತಿದೆ. ಅಮ್ಮ ಎಂಬ ಎರಡು ಅಕ್ಷರದಲ್ಲಿ ಏನೋ ಇದೆ . ಆ ಪ್ರೀತಿಯ ಭಾವನೆ ವಿವರಿಸಲು ತುಂಬಾ ಕಷ್ಟ.

  ReplyDelete
 6. Heart touching words.... nice one thote....

  ReplyDelete
 7. ಇದನ್ನೋದಿದಾಗ ನನಗನಿಸಿದ್ದು "ಇದು ನಿನ್ನ ಬಾಳಿಗೆ ಹಿಡಿದ ಕೈಗನ್ನಡಿ".
  ಒಬ್ಬ ಸದೃಡ, ಸಹೃದಯದ ಮನುಷ್ಯನ್ನನಾಗಿ ಮಾಡಲು ನಿನ್ನ ತಾಯಿಯ ನಿಸ್ವಾರ್ಥತೆ ಮತ್ತು ಪಟ್ಟ ಕಷ್ಟಕಾರ್ಪಣ್ಯ ನಿನ್ನೆದೆಯ ಅಂತರಾಳದಲ್ಲಿ ಬಧ್ರವಾಗಿ ನೆಲೆಯೂರಿದೆ. ಇಂತಹ ನೆಲೆಗಟ್ಟುಗಳು ನಿನ್ನನ್ನು ಒಬ್ಬ ಮನುಷ್ಯನ್ನನ್ನಾಗಿ ರೂಪಿಸುತವೆ. ಇಂತಹ ನೆಲೆಗಟ್ಟುಗಳು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದೊಂದು ಬಗೆಯಿಂದ ವಿಸ್ತ್ರುತವಗಿರುತದೆ. ಉದಾಹರಣೆಗೆ ಕಂಸನನ್ನು ಹಡೆದವಳು ತಾಯಿಯೇ, ಕೃಷ್ಣನನ್ನು ಹಡೆದವಳು ತಾಯಿಯೇ. ಆದರೆ ಅವರ ನಡುವೆ ಇದ್ದ ಅಂತರ??? ಈ ಎರಡು ಜೀವಗಳು ತಾಯಿ ಎಂಬ ಎರಡಕ್ಷರದ ಮಮತೆಯಿಂದ ಹುಟ್ಟಿದ್ದರೂ, ಅವರ ನೆಲೆಗಟ್ಟುಗಳು ನ್ಯಾಯ ಅನ್ಯಾಯಗಳ ದಾರಿಯನ್ನು ಹಿಡಿಯಿತು. ಅದೇನೇ ಇರಲ್ಲಿ ಈ ಪದ್ಯ ಓದಿದವರಿಗೆ ಅವರ ಅಂತರಂಗದಲ್ಲಿ ಹುದುಗಿ ಹೋಗಿದ್ದ ವಿಚಾರಗಳನ್ನು ಮತ್ತೆ ನೆನಪಿಸುವುದರಲ್ಲಿ ಸಂಶಯವಿಲ್ಲ.

  --
  ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು...
  ಕಡಿಯಲೋಲ್ಲೆ ಈ ಕರುಳ ಬಳ್ಳಿ ಒಲವು ಮೂಡುತಿರುವ ತಾಯೆ ಬಿಡದ ಭುವಿಯ ಮಾಯೆ.

  ReplyDelete
 8. ಗೌಡ್ರೆ, ಇದು ಗದ್ದಲ ಅಲ್ಲ... ಗಲಾಟೆ ಅಲ್ಲ..
  ಇದುವರೆಗೂ ನೀವು ಬರೆದಿರುವ ಬೆಸ್ಟ್ ಕವನ ಇದು. ಮನ ಮುಟ್ಟತ್ತೆ, ತಟ್ಟತ್ತೆ..
  ತುಂಬಾ ಚೆನ್ನಾಗಿದೆ.. ಹೀಗೆ ಬರೀತಿರಿ..

  ReplyDelete
 9. Wow! that was .....something.
  I mean, to not appreciate ones mother is impossible. Whats nice is the way those feelings are put in words....Touchy.

  Any plans of a... Thote's kavana sanchike. Bet it will sell.

  ReplyDelete
 10. ಎಲ್ಲಾರಿಗೂ ತಮ್ಮ ಅಮೂಲ್ಯವಾದ ಪ್ರೋತ್ಸಾಹಭರಿತ ಅನಿಸಿಕೆಗಳಿಗೆ ವಂದನೆಗಳು...

  ReplyDelete
 11. Awesome!!! No more words to appreciate this.....

  ಎಲ್ಲರಿಗೂ ಅದೇ ತರಹ ತಾಯಿಯ ಪ್ರೀತಿ ಸಿಗಲಿ ಎಂದು ಅ ದೇವರಲ್ಲಿ ಬೇಡುತ್ತೇನೆ.....

  ReplyDelete
 12. superb kavana..whenz the next one?? n ya u resemble ya mom a lot:)

  ReplyDelete
 13. Gowdre ... Very good KAVANA.... its really heart touching....

  ReplyDelete
 14. maga super idu.. really impressed..

  ReplyDelete