Friday, January 6, 2012

ಪಯಣ


ಎಲ್ಲೂ ನಿಲ್ಲದೆ ಸಾಗುವ ಅಲೆಮಾರಿ ಜೀವನ
ಸಾವಿನಾಗಮನದಿಂದಲೆ ಅಂತ್ಯಕಾಣುವ ಪಯಣ
ಪಯಣದುದ್ದಕೂ ಸೆಳೆವ ನೂರಾರು ಕವಲುದಾರಿಗಳು
ಪ್ರತಿಯೊಬ್ಬರೂ ಅವರವರ ಹಾದಿ ಹುಡುಕಾಟದಲಿ ಮಗ್ನ
ಒಬ್ಬೊಬ್ಬರಿಗೆ ಒಂದೊಂದು ತೋರ್ಗಲ್ಲು ಆಧಾರವಿಲ್ಲಿ
ಯಾವುದನ್ನು ನಂಬಿ ನಡೆಯಲಿ ನಾ ಮುಂದೆ?

ಯಾರ ನೆರವಿನ ನೆರಳು ಕಾಣದ ದಾರಿಯಲಿ
ಯಾವ ಧರ್ಮದ ದೇವರ ಸುಳಿವೂ ಇಲ್ಲ
ಮಾಡಿದ ಪೂಜೆಯ ಫಲವೂ ಕಾಣಿಸುತಿಲ್ಲ
ನನ್ನೆದೆಯ ದನಿ ದೂಕುವ ದಾರಿಯಲಿ ನೆಡೆದು
ಮಾಡಬಾರದೇಕೆ ನನ್ನದೇ ಒಂದು ಹೊಸ ದಾರಿ?
ಬಾರಯ್ಯ ವಿವೇಕಗುರುವೆ ಕಾಪಾಡೆನ್ನ ದಿಕ್ಕೆಡದಂತೆ!

ಪಯಣದ ಆದಿಯಲೇ ಸಕಲ ನೋವುಂಡು ಮಾಗಿದರೆ
ಮುಂದಿನ ಹಾದಿಯ ಸವೆಸಲು ಯಾವ ಮೆಟ್ಟೂ ಬೇಡ
ಒಬ್ಬನ ಕೈ ಹಿಡಿದು ಮೇಲೇರಿ, ಮತ್ತೊಬ್ಬನಿಗೆ ಕೈ ನೀಡು
ಕಾಲೆಳೆಯುವವನನ್ನೇ ಮೆಟ್ಟಿಲು ಮಾಡಿ ಮುಂದೆ ಸಾಗು
ಸಾಗುವ ದಾರಿಯಲ್ಲೇ ಅಡಗಿರುವುದೆಲ್ಲ ಜೀವನದ ಭಾಗ್ಯ
ಏನೇ ಆದರೂ, ಯಾರೇ ಬಂದರೂ, ಎಂದೂ ನಿಲ್ಲದಿರಲಿ ಪಯಣ!

5 comments:

 1. ಗೌಡ್ರೇ, ನಿಮ್ಮ ಮುಂದಿನ ಪಯಣ ಸುಖಕರವಾಗಿರಲಿ.. ಹೀಗೇ ಗದ್ಲ ಮಾಡ್ತಾ ಇರಿ. ಚೆನ್ನಾಗಿದೆ

  ReplyDelete
 2. Gowdre.... All the best for ur future endeavour.....

  ReplyDelete
 3. ಕಾಲೆಳೆಯುವವನನ್ನೇ ಮೆಟ್ಟಿಲು ಮಾಡಿ ಮುಂದೆ ಸಾಗು - what an idea sirji.... I liked this line very much. I want to learn this "Kale" is my life.

  All the best for your future. Hope somewhere down the line, we will meet again :) :)

  ReplyDelete