Monday, October 3, 2011

ಬೇಡಿಕೆ



ನಿನ್ನೊಂದಿಗೆ ಕಳೆಯುತಿರುವ
ಪ್ರತಿಯೊಂದು ಕ್ಷಣಗಳು
ಕೂಗಿ ಕೂಗಿ ಕೇಳುತಿವೆ,
ಕೂಡಿಡು ನಮ್ಮನು ನೆನಪಿನ ಖಜಾನೆಯಲಿ
ಉಪವಾಸದಿ ಮೆಲುಕುಹಾಕುವ ತುತ್ತಾಗಬೇಕಿದೆ ಎಂದು!

ನನ್ನೊಳಗೆ ಏಳುತಿರುವ
ನೂರಾರು ಪ್ರಶ್ನೆಗಳು
ಕಾಡಿ ಕಾಡಿ ಕೇಳುತಿವೆ,
ನಮಗುತ್ತರ ಹುಡುಕದಿರು ಎಂದೆಂದೂ
ನಮ್ಮ ಉತ್ತರಗಳು ಉತ್ತರಿಸಲಾಗದ ಪ್ರಶ್ನೆಗಳೆ ಎಂದು!

ಮನದಲಿ ಮೂಡುತಿರುವ
ಪ್ರತಿಯೊಂದು ಮಾತುಗಳು
ಬೇಡಿ ಬೇಡಿ ಕೇಳುತಿವೆ,
ನುಡಿಯದಿರು ನಮ್ಮನು ಎಂದೆಂದೂ
ನುಡಿದು ಒಡೆಯದಿರು ಭಾವಗಳ ಮೌನರಾಗವ ಎಂದು!

ನಿನ್ನನ್ನೇ ನೋಡುತಿರುವ
ನನ್ನೆರಡು ಕಣ್ಗಳು
ಪರಿ ಪರಿ ಹೇಳುತಿವೆ,
ನೋಡಿಬಿಡು ರಪ್ಪೆಯೊಡೆಯದೆ
ಮಾಯವಾಗಲಿದೆ ಕಣ್ಣೆದುರಿಗಿರುವಂದ ಎಂದು!

ನಿನ್ನನ್ನು ಬಿಗಿಯಾಗಪ್ಪಿರುವ
ನನ್ನೆರಡು ತೋಳ್ಗಳು
ಒತ್ತಿ ಒತ್ತಿ ಹೇಳುತಿವೆ,
ಸಡಿಲಗೊಳಿಸದಿರು ಅಪ್ಪುಗೆಯ
ಕನಸಿನೊಳಗಿಂದ ಕೆಳಗೆ ಜಾರಿಬೀಳುವೆ ಎಂದು!

ಜೋರಾಗಿ ಬಡಿಯುತಿರುವ
ನನ್ನೆದೆಯ ಕಂಪನಗಳು
ಕುಗ್ಗಿ ಕುಗ್ಗಿ ಹೇಳುತಿವೆ,
ಕೇಳದಿರು ಅವಳೆದೆಬಡಿತ
ಸುಮ್ಮನೆ ಯಾತಕೆ ಯಾತನೆ ಎರೆಡೆದೆಗೂ ಎಂದು!

6 comments:

  1. Manadaaladinda bandantide pratiyondu maatu, atii bhavapurnavaagide.

    "ಕೂಡಿಡು ನಮ್ಮನು ನೆನಪಿನ ಖಜಾನೆಯಲಿ
    ಉಪವಾಸದಿ ಮೆಲುಕುಹಾಕುವ ತುತ್ತಾಗಬೇಕಿದೆ ಎಂದು!"
    Some memories remain with us, cherished forever. Down the memory lane when we look back, they do bring smiles.

    Something similar, and my personal favorite lines from a song:
    "ನೆನಪಿನಲ್ಲೇ ನೀನೀಗ ಎಂದಿಗಿಂತ ಸನಿಹ,
    ಅಳಿಸಲಾರೆ ನಾನಿಂದು ಮನದ ಗೋಡೆ ಬರಹ"

    Very meaningful, beautifully expressed in simple words.
    Loved the last lines of every para.
    Loved every bit of it.

    Direct Dil Se…

    ReplyDelete
  2. @Sumi - I'm not sure my gaddala is as good as you are saying.. but seriously thank you lot for the love and support you are showing.

    ReplyDelete
  3. ಸುಮ್ಮನೆ ಯಾತಕೆ ಯಾತನೆ ಎರೆಡೆದೆಗೂ ಎಂದು!!!!

    E yaathneye preetiya moola Gowdre, aa yaathaneyalli eno suka ede.

    ReplyDelete
  4. @ಕೆಪಿ - ನಿಮ್ಮ ಅನಿಸಿಕೆ ನೂರಕ್ಕೆ ನೂರರಷ್ಟು ಸತ್ಯ! ಧನ್ಯವಾದಗಳು ನಿಮ್ಮ ಅನಿಸಿಕೆಗಳಿಗೆ.

    ReplyDelete
  5. ಪ್ರೀತಿಯ ಗೌಡರೆ

    ಎರಡು ಹೃದಯಗಳ ಅಂತರಾಳದ ಮಾತುಗಳಿವು. ಬಹಳ ಚೆನ್ನಾಗಿ ನಿರೂಪಿಸಿದ್ದೀರ. ಹೌದು, ಇಲ್ಲಿ ಮೂಡಿ ಬಂದಿರುವ ಭಾವನೆಗಳು ಬರಿ ಕಾಲ್ಪನಿಕವೋ, ನಿಮ್ಮ ನಿಜ ಜೀವನದ ಅನುಭವವೋ ತಿಳಿಯದು :) . ಯಾಕೆಂದರೆ, ಶಬ್ದಗಳಲ್ಲಿರುವ ಭಾವಾರ್ಥ ಕೇವಲ ಕಾಲ್ಪನಿಕವಾಗಿರುವಂತಿಲ್ಲ. ಅಷ್ಟು ಚೆನ್ನಾಗಿ ಬರೆದಿದ್ದೀರ.

    ಜೊತೆಯಲ್ಲಿ ಇರುವ ಕ್ಷಣಗಳು - ಆ ನೆನಪುಗಳಿಗೆ ನಿಜವಾದ ಮೌಲ್ಯ ಸಿಗುವುದು ಯಾವಾಗ ಜೊತೆಯಲ್ಲಿ ಇರುವುದಿಲ್ಲವೋ ಆವಾಗ. :)
    ಇನ್ನು ಪ್ರಶ್ನೆಗಳು - ನಮ್ಮ ಮನಸ್ಸು ಬರಿ ಪ್ರಶ್ನೆ ಕೇಳೋದೇ ಆಯಿತು. ಉತ್ತರ ಸಿಕ್ಕಿದರು, ಸಿಗದಿದ್ದರೂ ಅದಿಕ್ಕೆ ಮಾತ್ರ ನಿದ್ದೆ ಬರಲ್ಲ :)
    ಮೌನ ರಾಗ - ಇದರ ಬಗ್ಗೆ ನಾನು ಏನು ಹೇಳಲಾರೆ :)
    ಇನ್ನು ಕೊನೆಯ ಚರಣ - ಅಚ್ಚ ಕನ್ನಡದಲ್ಲಿ ಹೇಳೋದಾದರೆ - ಅತ್ತ್ಯುತ್ತಮ :)

    ಇಂತಿ
    ಸುನಿಲ್ ಪಡಿಯಾರ್

    ReplyDelete
  6. @ಸುನಿಲ್ - ಇಂದು ಒಂಥರಾ ಕಾಲ್ಪನಿಕ ಅನುಭವ ಅನ್ನಬಹುದೇನೊ. ಗೊತ್ತಿಲ್ಲ!. ಧನ್ಯವಾದಗಳು ನಿನ್ನ ಪ್ರೋತ್ಸಾಹದಾಯಕ ಅನಿಸಿಕೆಗಳಿಗೆ.

    ReplyDelete