Monday, February 7, 2011

ಪ್ರೀತಿಯಾರಾಧಕ

ಸೌಂದರ್ಯವೆ ಜಗಕೆ ಮೂಲದೇವರೆಂದರೆ
ನಿನಗಿಂತ ಮಿಗಿಲಾದ ದೇವತೆ ಎನಗಿಲ್ಲ;
ಧ್ಯಾನವೊಂದೆ ಜೀವಕೆ ಮುಕ್ತಿಮಾರ್ಗವೆಂದರೆ
ನನ್ನನ್ನ ಮೀರಿಸುವ ಯೋಗಿಯ ಕಂಡಿಲ್ಲ;

ಒಂಟಿಬಾಳಿನ ಬವಣೆ ನೀಗಲು ವರವಾಗಿ ನೀ ಬಂದು
ಬ್ರಹ್ಮ ನನ್ನೊಳಗವತರಿಸುವರೆಗೂ ಬಿಡದೆ ಮುದ್ದಾಡು;
ನಾನಟ್ಟಿಟ್ಟ ರಸದೆಡೆಯ ನೈವೇದ್ಯವ ನೀ ಸವಿದು
ಹಸಿದ ಭಕ್ತನ ಬಯಕೆಗಳ ಉಪವಾಸಕೆ ಅಂತ್ಯಹಾಡು;

ಸರಸದಲಿ ಬೆಂದು, ರಸಸಮಾಧಿಯಲಿ ಮಿಂದು
ಹರಯವೆಂಬ ಹರಕೆ ಅರ್ಪಿಸಿ ಹಾಡೊ ದಾಸನಿವ;
ಮುತ್ತಿನಲಿ ಸಿಂಗರಿಸಿ, ಲಾವಣ್ಯಮಂತ್ರ ಜಪಿಸಿ
ಪ್ರಣಯಾಭಿಷೇಕದ ಅರ್ಚನೆಮಾಡೊ ಶರಣನಿವ;

ಕಾಮಕಮ್ಮಟದಿ ನನ್ನ ಕಸರತ್ತಿನ ಕುಶಲತೆಗೆ ಕರಗಿ
ಆ ರಮಿಸುವ ಪರಿಯ ಪರಿಧಿಗೆ ಬೆಕ್ಕಸ ಬೆರಗಾಗಿ
ನೀ ಕಣ್ಣಲ್ಲೇ ಕರುಣಿಸಿದ ಕಾಮೇಶ್ವರಜ್ಯೋತಿಯ
ಆರದ ಹಾಗೆ ಸದಾಕಾಪಾಡೊ ಕರ್ಮಯೋಗಿಯಿವ;

5 comments:

  1. Gowdre,
    ಇದು ಕಾಮಾರಾಧನೆ ... :)
    ಒಬ್ಬ ಪ್ರಿಯಕರನ ಪ್ರೆಮಾರಾಧನೆ ತರ ಇಲ್ಲ.

    anyways..its good...those words u have used are just awesome...

    ಬ್ರಹ್ಮ ನನ್ನೊಳಗವತರಿಸುವರೆಗೂ ಬಿಡದೆ ಮುದ್ದಾಡು; wah rey wah...

    ReplyDelete
  2. ಗೌಡ್ರೆ, 'A' ಕ್ಲಾಸ್ಸಿದೆ ;) :) :)

    ReplyDelete
  3. Thank you Shami and Naveen ;) Hope you guyz had fun reading it.

    ReplyDelete
  4. Has come good with your feelings. I guess its more of your own feelings towards your loved one than just a poem.

    Good Work... :)

    ReplyDelete