Tuesday, April 6, 2010

ನಾನ್ಯಾಕೆ ಹಾಳಾಗಿ ಹೋದೆ?

ಗೆಳೆಯರ ಬಳಗದಲಿ ಕೂಡಿ
ಸಕಲ ವಿದ್ಯಾ ಪರಿಣಿತನೆಂದು ಚೋಡಿ
ಮೂರು ಲೋಕದ ಅಧಿನಾಯಕನಂತಿದ್ದ ನನಗೆ,
ನಿನ್ನ ಪುಟ್ಟ ಹೃದಯವ
ನನಗರಿಯದೆ ನನ್ನಲ್ಲಿ ಅಡಗಿಸಿ
ಹೃದಯದ ಚೋರನೆಂಬ ಅಪವಾದ ಹೊರಿಸಿ
ಸೆರೆಯಾಳು ಮಾಡಿ,
ಹೃದಯದ ಕೊಣೆಯಲ್ಲಿ ಬಂಧಿಸಿ
ಘೋರ ಒಂಟಿತನದ ಸುಳಿಯಲ್ಲಿ ಸಿಕ್ಕಿಸಿದ
ಕರುಣೆಯೇ ಇಲ್ಲದ ಪ್ರೀತಿಯ ಮಾಯೆ ನೀನು

ಹೊಟ್ಟೆ ಭಿರಿಯುವವರೆಗೆ ಮುದ್ದೆ ತಿಂದು
ಗೊರಕೆ ಬರುವ ಹಾಗೆ ನಿದ್ದೆ ಮಾಡಿ
ಕುಂಬಕರ್ಣನಂತಿದ್ದ ನನಗೀಗ
ನಿದ್ದೆ ಮುದ್ದೆ ಬಲು ದೂರ
ರಾತ್ರಿಯೆಲ್ಲ ಆಕಾಶ ನೋಡುವ ಹುಡುಗಾಟ
ಒಲವಿನ ಸಂದೇಶಗಳ ನಿರೀಕ್ಷೆಯ ಕಾದಾಟ
ಮನದಲ್ಲಿ ಹಲವು ಆಸೆಗಳ ಕಚ್ಚಾಟ
ಹಾಳು ಪ್ರೇಮ ಗೀತೆಗಳ ಗೀಚಾಟ
ಕಾರಣವಿಲ್ಲದೆ ತನ್ನಷ್ಟಕ್ಕೆ ತಾನೇ ನಗುವ ಹುಚ್ಚಾಟ
ನಿದಿರೆ ಹಸಿವಿಗೆ ಲಂಚ ಕೊಟ್ಟು
ಯೋಚನಾ ಲಹರಿಯನ್ನು ತನ್ನೆಡೆಗೆ ಸೆಳೆದು
ಹಿತವಾದ ನೋವು ಕೊಟ್ಟ ಮಾಯಗಾತಿ ನೀನು

ನೂರಾರು ಭಾರಿ ಕೇಳಿ,
ಎಂದೋ ಮರೆತು ಹೋದ
ಹಳೆಯ ಚಿತ್ರ ಗೀತೆಗಳು,
ಇಂದೇಕೋ ಮನ ಕಲಕುತ್ತಿವೆ
ಹಳೆ ರಾಗಗಳು ಹೊಸ ಮಾಧುರ್ಯದೊಂದಿಗೆ
ಹಳೆ ಸಾಲುಗಳು ಹೊಸ ಅರ್ಥಗಳೊಂದಿಗೆ
ಹಳೆ ದೃಶ್ಯಗಳು ಹೊಸ ಪಾತ್ರಧಾರಿಗಳೊಂದಿಗೆ
ನೇರವಾಗಿ ಹೃದಯದ ಗರ್ಭಗುಡಿ ತಲುಪಿ
ಅಪರೂಪದ ವ್ಯಾಮೋಹವ ಬಡಿದೆಬ್ಬಿಸಿವೆ
ಈ ಹಳೆ ಗೀತೆಗಳಿಗೆ ಶಸ್ತ್ರ ಚಿಕತ್ಸೆ ಮಾಡಿ
ಹೊಸ ಭಾವಗಳನ್ನು ತುರುಕಿದ ವ್ಯೆದ್ಯೇ ನೀನು

4 comments:

  1. tumba chennagide...
    ellinda ellige holike..
    I have to read several times to undesrtand.

    ReplyDelete
  2. ಯಾರವಳು ನಮ್ಮ ಗೌಡರನ್ನು ಇ ಪರಿಯಾಗಿ ಗೋಳು ಹೊಯ್ಯುವವಳು. ನಿಮ್ಮ ಹೃದಯದ ಭಾವನೆ ಅವಳ ಮನದ ಕದವನ್ನು ಏತಕ್ಕೆ ತೆರೆಯದೆ ಒಳೊಳಗೆ ಸುಡುತಿದೆ? ನಿಮ್ಮನ್ನು ಅವಳು ತುಂಬಾ ಸತಯಿಸುತಿದ್ದಾಳೆ !!

    ಇ ವೇದನೆ ನಿಮಗೂ ಒಂತರ ಖುಷಿ ಕೊಡುತಿದೆಯ???

    ReplyDelete
  3. @Sumi: Thanks
    @KP: I really liked your comment

    ReplyDelete
  4. ಗೌಡ್ರೆ ಚೆನ್ನಾಗಿದೆ ನಿಮ್ಮ ಕವಿತೆ.. ಎಲ್ಲೆಲ್ಲೂ ನಿಮಗೆ ಇಂತಹ ಸಿಹಿ ಕಾಟ ಕೊಟ್ಟು ತಲೆ ಕೆಡಿಸಿ ಇಂತಹ ಕವಿತೆಗಳನ್ನು ಬರೆಯೋ ಹಾಗೆ ಮಾಡಿದವರಿಗೆ ಜೈ ಹೋ...!!

    ReplyDelete