Tuesday, January 19, 2010

ಹೊಸ ಕವಿತೆಯ ಪರಿಚಯ

ನಿನ್ನಯ ಪ್ರೀತಿಯ ಉಸಾಬರಿಯೆ
ನನ್ನಯ ಪ್ರತಿನಿತ್ಯದ ಕಸುಬು
ನಿನ್ನಯ ಒಲವಿನ ಭಿಕ್ಷೆಯೆ
ನನ್ನಯ ಜೀತದ ಕೂಲಿ
ನಿನ್ನಯ ಅನುರಾಗದ ಪರಮ್ಮಾನ್ನವೆ
ನನ್ನಯ ಮೂರೊತ್ತಿನ ಕೂಳು

ನೀ ಎದುರಿದ್ದರೆ ನನ್ನ್ನೇ ನಾ ಮರೆವೆ
ನೀ ಮರೆಯಾದರೆ ಕಣ್ತುಂಬ ನೀನೆ ಕಾಣುವೆ
ಹಗಲೆಲ್ಲಾ ಮಾತಾಡುವೆ ಮೌನದಲಿ
ಇರುಳೆಲ್ಲಾ ಪ್ರೀತಿಸುವೆ ಕನಸಿನಲಿ

ಎದೆಯೊಳಗೊಮ್ಮೆ ಅನಿರೀಕ್ಷಿತ ದಾಳಿ ಮಾಡು
ಬಂಧಿಸುವೆ ಕವಿತೆಯೊಳಗೆ
ಮನಸಿನೊಳಗೊಮ್ಮೆ ದಾರಿತಪ್ಪಿ ಭೇಟಿ ನೀಡು
ಕಟ್ಟಿಹಾಕುವೆ ರಾಗದೊಳಗೆ
ಕನಸಿನೊಳಗೊಮ್ಮೆ ಅರಿವಿಲ್ಲದೆ ಇಳಿದು ನೋಡು
ಬಚ್ಚಿಡುವೆ ಚಿತ್ರಪಟದೊಳಗೆ

ನೀ ಮೌನದಲಿ ಮಾತಾಡಲು
ಹೊಸ ಭಾಷೆಯ ಉದಯ
ಕಿವಿಯಲಿ ನೀ ಪಿಸುಗುಡಲು
ಹೊಸ ರಾಗದ ಆರಂಭ
ದಿಟ್ಟಿಸಿ ನೋಡಲು ನೀ
ಹೊಸ ಕವಿತೆಯ ಪರಿಚಯ
ನೀ ಸನಿಹ ಕುಳಿತಿರಲು
ಹೊಸ ಲೋಕದ ಸೃಷ್ಟಿ
ದಿನವಿಡೀ ನೀ ಜೊತೆಗಿರಲು
ದಿನದ ತಾಸುಗಳ ಅಭಾವ

5 comments:

  1. Navin Math...
    Wa Wa, goudre, this is not just parichya, its full picture of ur feeling about ur loved one.

    ReplyDelete
  2. Thote innoo ondu step munde bandru... next poem nalli yava oorinavalu antadru gottagbodu kaantade :)

    ReplyDelete
  3. ನಿಮ್ಮ ಪ್ರಿಯತಮೆಗೆ ಮೌನ ಮುರಿಯಲು ಹೇಳಿ. ನಿಮ್ಮನ್ನು ಅವಳು ತುಂಭಾ ಸತಾಸಿತಿದ್ದಾಳೆ. ನಿಮ್ಮ ಮನಸಿನ ವೇದನೆಯನ್ನು ಅವಳಿಗೆ ತಲುಪಿಸಿ, ಹೊಸ ಗದ್ದಲಕ್ಕೆ ನಾಂದಿ ಹಾಕಿ.

    ReplyDelete
  4. ಚೆನ್ನಾಗಿದೆ ಗೌಡ್ರೆ, ಇಷ್ಟೊಂದು ಒಳ್ಳೆ ಸಾಲುಗಳನ್ನ ಬರಿತಿದ್ದೀರಿ.ಬರೀ ಸಾಲುಗಳು ಅನ್ನಿಸದೆ ಏನೋ ಅನುಭವ ಇರೋ ಹಾಗೆ ಅನ್ಸತ್ತೆ. ;)
    ಯಾವುದೇ (ಅಥವಾ ಯಾರದೇ) ಸ್ಪೂರ್ಥಿ ಇಲ್ಲಧಾಂಗೆ ಬರೀ ಕಲ್ಪನೆಯಿಂದಲೇ ಬರಿತಿದ್ದೀರಿ ನಂಬಲಿಕ್ಕೆ ಕಷ್ಟ ಆಗ್ತದೆ.;-)

    ReplyDelete
  5. Gowdre, i think you should try writing romantic songs for movies:)
    Full romantic poet aagidiri:) good going:)

    ReplyDelete