Saturday, November 14, 2009

ಹೀರೋ ಪೆನ್ನಿನ ಆಸೆಯಿಂದ ಆದ ಹೀರೋ!

ನನ್ನ ಇಲ್ಲಿಯವರೆಗಿನ ಜೀವನ ಕೇವಲ ಆಕಸ್ಮಿಕ ಘಟನೆಗಳ ಸರಮಾಲೆ, ನನ್ನ ಜೀವನದ ಕೆಲವು ಮುಖ್ಯವಾದ ಕೆಲವು ತಿರುವುಗಳು ಸರಿಯಾದ ಸಮಯದಲ್ಲಿ ಘಟಿಸದಿದ್ದರೆ, ನಾನು ದಿನ ಏನಾಗಿರ್ತೆದ್ದೆ ಅಂಥ ಊಹೆ ಮಾಡಿಕೊಳ್ಳಲು ಕೂಡ ಕಷ್ಟ ಹಾಗ್ತದೆ (ಬಹುಶಃ ಬೇಲೂರು ಕ್ಷೇತ್ರದ ಶಾಸಕ ಆಗಿರುತಿದ್ದೆ:-)). ಅಂಥ ಕೆಲವು ಘಟನೆಗಳ ಬಗ್ಗೆ ಬರೆಯುವ ಅಸೆ. ಇದನ್ನೆಲ್ಲಾ ನಾನು ಹೀರೋ ಅಂಥ ಜಂಭ ತೋರ್ಪಡಿಸಲು ಬರೆಯುತ್ತಿಲ್ಲ, ನಮ್ಮ ಜೀವನದಲ್ಲಿ ನೆಡೆಯುವ ಸಣ್ಣ ಸಣ್ಣ ಘಟನೆಗಳು ಎಷ್ಟು ಮಹತ್ವ ಪಡೆಯುತ್ತವೆ ಎಂದು ಹೇಳುವ ಪ್ರಯತ್ನ. I can see all those dots connecting perfectly in my life.

೮ನೇ ತರಗತಿಯನ್ನು ಹಳೇಬೀಡಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತಿದ್ದೆ. ನಮ್ಮೂರಿನಿಂದ ಹಳೇಬೀಡು ಸುಮಾರು ಕಿ ಮಿ, ದಿನಾಲು ಸೈಕಲ್ಲಿನಲ್ಲಿ ಹೋಗಿ ಬರುತಿದ್ದೆ. ವರ್ಷ ದ್ವಿತೀಯ ದರ್ಜೆಯಲ್ಲಿ (೩೧೦/೬೨೫) ಉತ್ತೀರ್ನನಾಗಿದ್ದು ನನ್ನ ದೊಡ್ಡ ಸಾಧನೆ, ಏಕೆಂದರೆ ಒಂದೇ ಒಂದು ದಿನ ಕೂಡ ಮನೆಯಲ್ಲಿ ಕೂತು ಓದಿರಲಿಲ್ಲ (ನಂಬಿದರೆ ನಂಬಿ, ಇದು ಸತ್ಯ!. ನನಗೆ ತಿಳಿದಿರೋ ಪ್ರಕಾರ, ನಾನು ನೇ ತರಗತಿ ಮುಗಿಸಿದ್ದರು ಒಂದು ದಿನ ಕೂಡ ಮನೆಯಲ್ಲಿ ಕೂತು ಓದಿರಲಿಲ್ಲ, ನನಗೆ ಓದಬೇಕು ಅಂಥ ಕೂಡ ಯಾರು ಹೇಳಿರಲಿಲ್ಲ). ನಮ್ಮ ಶಾಲೆಯ ಒಟ್ಟು ೧೬೦ ವಿಧ್ಯಾರ್ಥಿಗಳಲ್ಲಿ, ಸುಮಾರು ೧೦ ಜನ ಪ್ರಥಮ ದರ್ಜೆ ಹಾಗು ಸುಮಾರು ೨೦ ಜನ ದ್ವೀತಿಯ ದರ್ಜೆಯಲ್ಲಿ ಪಾಸಾಗಿದ್ದರು, ಅವರುಗಳಲ್ಲಿ ನಾನೊಬ್ಬ ಆಗಿದ್ದರಿಂದ ನನ್ನ ಸಾಧನೆ ಬಗ್ಗೆ ನನಗೆ ತುಂಬ ಸಮಾಧಾನ ಇತ್ತು. ಮನೆಗೆ ಹೋಗಿ ಅವ್ವಂಗೆ ನಾನು ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದೇನೆ ಅಂಥ ಹೇಳಿದೆ, ನಮ್ಮಪ್ಪಂಗೆ ಅದನ್ನೆಲ್ಲಾ ಕೇಳುವುದಕ್ಕೆ ಸಮಯ ಇರಲಿಲ್ಲ. ನನ್ನ ಅವ್ವ ಹೋಗಿ ಊರಿನಲ್ಲಿರುವ ಪ್ರತಿಯೊಬ್ಬರಿಗೂ "ನನ್ಮಗ ಹಳೇಬೀಡಿಗೆ ಸೆಕೆಂಡ್ ಬಂದಿದ್ದಾನೆ!" ಅಂಥ ಎಲ್ಲಾರಿಗೂ ಹೆಮ್ಮೆಯಿಂದ ಹೇಳಿಕೊಂಡು ಬಂದಿದ್ದರು, ಅಂದು ನಮ್ಮ ಮನೆಯಲ್ಲಿ ಸುಮಾರು ೨೫ ಜನರಿಗೆ ಹಬ್ಬದೂಟ!.

ನೇ ತರಗತಿ ಶುರುವಾದ ಕೆಲವೇ ದಿನಗಳಲ್ಲಿ ಶಾಲೆಯಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪದೇ ಇಬ್ಬರು ವಿಧ್ಯಾರ್ಥಿಗಳಿಗೆ "ಹೀರೋ" ಪೆನ್ನನ್ನು ಉಡುಗೊರೆಯಾಗಿ ಕೊಟ್ಟರು. ನಮ್ಮ ತರಗತಿಯಲ್ಲಿ ಪ್ರದೀಪ್ ಮತ್ತು ತಾರಮಣಿ ಎಂಬ ಇಬ್ಬರು ವಿಧ್ಯಾರ್ಥಿಗಳಿಗೆ ಸಿಕ್ಕಿತ್ತು.

ಸಮಯದಲ್ಲಿ ನಮ್ಮಪ್ಪ ನನಗೆ ವಾರಕ್ಕೆ ಕೊಡುತಿದ್ದ "ಪಾಕೆಟ್ ಮನಿ" ಕೇವಲ ಒಂದರಿಂದ ಐದು ರೂಪಾಯಿಗಳು, ಅದನ್ನು ಮೈಸೂರ್ ಪಾಕ್ ಅಥವಾ ಕಡ್ಲೆ ಮಿಠಾಯಿ ತಿಂದು ಮುಗಿಸಿ ಬಿದುತಿದ್ದೆ. ಆದರೆ ನನಗೆ ಹೀರೋ ಪೆನ್ ತಗೊಂಡು ಬರೀಬೇಕು ಅಂಥ ತುಂಬ ಆಸೆ ಇತ್ತು. ನಮ್ಮಪ್ಪನ್ನ ತುಂಬ ಸರತಿ ಕೇಳಿ ಸುಮ್ಮನಾಗಿದ್ದೆ ಮತ್ತು ಅಪ್ಪ ಕೊಡುತಿದ್ದ "ಪಾಕೆಟ್ ಮನಿ"ಯಲ್ಲಿ ಪೆನ್ ತಗೋಳೋದು ಸಾಧ್ಯ ಇರಲಿಲ್ಲ (ತುಂಬ ಸರತಿ ಹಣ ಕೂಡಿ ಹಾಕಲಿಕ್ಕೆ ತಿಂಗಳಗಟ್ಟಲೆ ಪ್ರಯತ್ನ ಮಾಡಿ, ಎಲ್ಲ ಹಣ ಕಳೆದು ಕೊಳ್ಳುತಿದ್ದೆ).

೯ನೆ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದರೆ ನನಗೆ ಕೂಡ ಹೀರೋ ಪೆನ್ನು ಸಿಗುತ್ತದೆ ಅಂಥ ಅಸೆ ಆಯಿತು. ನನಗೆ ತಿಳಿಯದೆ ನಾನು ಕೂಡ ಓದಿ ಅತಿ ಹೆಚ್ಚು ಅಂಕ ತೆಗೆಯಬೇಕು ಅಂಥ ತೀರ್ಮಾನ ಮಾಡಿಬಿಟ್ಟೆ. ಮನೆಗೆ ಹೋಗಿ ಅಪ್ಪನಿಗೆ ನಾನು ಹಾಸ್ಟೆಲ್ ಸೇರಿಕೊಳ್ಳುತ್ತೇನೆ, ದಿನ ಹೋಗಿ ಬರಲಿಕ್ಕೆ ಕಷ್ಟ ಆಗ್ತದೆ ಅಂಥ ಹೇಳಿದೆ. ನಮ್ಮ ಕ್ಷೇತ್ರದ MLA ಜೊತೆ ಮಾತಾಡಿ ಒಂದೇ ದಿನದಲ್ಲಿ ಹಾಸ್ಟೆಲ್ ಗೆ ಸೇರಿಸಿದರು. ಹಾಸ್ಟೆಲ್ ನಲ್ಲಿ ಸುಮಾರು ೫೦ ಜನರು ಒಂದು ದೊಡ್ಡ ಹಾಲಿನಲ್ಲಿ ಜೀವಿಸುತಿದ್ದೆವು. ಅಲ್ಲಿಯ ಊಟ ಉಡುಪಿಯ ಹೋಟೆಲ್ ಊಟಕ್ಕಿಂತ ಕೆಟ್ಟದಾಗಿರುತಿತ್ತು. ಮೊದ ಮೊದಲು ಹುಡುಗರೆಲ್ಲ ಪ್ರತಿ ರಾತ್ರಿ ಓದುವುದನ್ನು ನೋಡಿ ನನಗೆ ವಿಚಿತ್ರ ಅನ್ನಿಸಿತಿತ್ತು. ಆದರೆ ಹಾಸ್ಟೆಲ್ ಭಟ್ಟರ ಶಿಕ್ಷೆ ತಡೆಯಲಾಗದೆ ನಾನು ಕೂಡ ಓದಲು ಶುರು ಮಾಡಿದೆ. ಅಲ್ಲಿ ಇದ್ದ ತುಂಬ ವಿಧ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಹೋಗುತಿದ್ದರು, ಅವರುಗಳಿಗೆಲ್ಲ ಹೀರೋ ಪೆನ್ನಿನಲ್ಲಿ ಬರೋಯೋದು ಕಡ್ಡಾಯವಾಗಿತ್ತು. ನಾನು ಅವರ ಹತ್ತಿರ ಹೀರೋ ಪೆನ್ನನು ಕೇಳಿ ಪಡೆದು, ಅದರಲ್ಲಿ ಬರೆದು ನನ್ನ ಆಸೆ ತೀರಿಸಿಕೊಳ್ಳುತಿದ್ದೆ.

ಈಗೆ ಒಂದು ದಿನ ೯ನೆ ತರಗತಿಯ ಪಲಿತಾಂಶ ಕೂಡ ಬಂತು, ಹಾಗು ನನಗೆ ಆಶ್ಚರ್ಯ ಕಾದಿತ್ತು. ನಾನು ನಮ್ಮ ತರಗತಿಗೆ ಮೊದಲೆನೆಯವನಾಗಿ ಉತೀರ್ಣನಾಗಿದ್ದೆ (೪೪೯/೬೨೫)!!!. ಪ್ರತಿ ವರ್ಷದ ಹಾಗೆ ಆ ವರ್ಷ ಕೂಡ ಪ್ರತಿಭಾವಂತರಿಗೆ ಬಹುಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನಗೆ ಪ್ರಥಮ ಬಂದ ಖುಶಿಗಿಂತ, ಹೀರೋ ಪೆನ್ನಿಗಾಗಿ ಭಕಪಕ್ಷಿಯಂತೆ ಕಾಯುತಿದ್ದೆ. ಆದರೆ ನನ್ನ ದುರದೃಷ್ಟಕ್ಕೆ ಆ ವರ್ಷ ಹೀರೋ ಪೆನ್ನಿನ ಬದಲು ೫೦ ರೂಗಳನ್ನು ಹುಡುಗರೆಯಾಗಿ ಕೊಟ್ಟರು.

ನಾನು ಆ ಹಣವನ್ನು ನೇರವಾಗಿ ಮನಗೆ ತಗೊಂಡು ಹೋದೆ. ಅವ್ವನಿಗೆ ನಾನು ಈ ಹಣದಿಂದ ಹೀರೋ ಪೆನ್ನನ್ನು ತೆಗೆದು ಕೊಳ್ಳುತ್ತೇನೆ ಅಂಥ ಹೇಳಿದೆ, ಅದಕ್ಕೆ ಅವರು ಹಾಗೆ ಬಹುಮಾನವಾಗಿ ಸಿಕ್ಕಿದ ಹಣ ನಮ್ಮದಲ್ಲ, ಅದನ್ನು ನಾವು ಉಪಯೋಗಿಸಬಾರದು ಅಂಥ ಹೇಳಿ, ನನ್ನ ಕೈಯಿಂದ ನಮ್ಮೂರಿನ ದೇವಸ್ತಾನದ ಹುಂಡಿಗೆ ಹಾಕಿಸಿದರು!. ನನಗೆ ತುಂಬ ನಿರಾಸೆಯಾಗಿ ಅಳು ಬಂದು ಬಿಟ್ಟಿತು, ನಾನು ಅಳುವುದನ್ನು ನೋಡಿದ ಅವ್ವ, ಅಪ್ಪನಿಗೆ ಹೇಳಿ ಕೊನೆಗೂ ಒಂದು ಹೀರೋ ಪೆನ್ನು ಕೊಡಿಸಿದರು!. ನನ್ನ ಆಸೆ ಕೂಡ ತೀರಿತು.

ಶಾಲೆಯಲ್ಲಿ ಜರುಗುತಿದ್ದ ಕಾರ್ಯಕ್ರಮ ನನ್ನ ಜೀವನದ ಮೊದಲ ಮುಖ್ಯವಾದ ತಿರುವು, ಅದ್ದರಿಂದ ನನ್ನ ಶಾಲೆಯ ಶಿಕ್ಷಕರಿಗೆ ನಾನು ಸದಾ ಚಿರಋಣಿ. ಚಿಕ್ಕ ವಯಸ್ಸಿನ ಆ ಸಣ್ಣ ಸಣ್ಣ ಆಸೆಗಳು ತುಂಬ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿಸುತ್ತವೆ. "ಜೀವನದಲ್ಲಿ ಯಾವುದೇ ಗುರಿ ಬೆನ್ನು ಹತ್ತಲು ಒಂದು ಸಣ್ಣ motivation ಅವಶ್ಯಕತೆ ಯಾವಾಗಲು ಇರುತ್ತದೆ". ಈಗೆ ನನ್ನ ಹಿಂದಿನ ಸಾದನೆಗಳನ್ನೆಲ್ಲ ಮೆಲುಕು ಹಾಕಿ ನನ್ನ ಮುಂದಿನ ಗುರಿ ಸಾದಿಸಲಿಕ್ಕೆ inspire ಮಾಡಿಕೊಳ್ಳುತಿದ್ದೇನೆ. ನಮ್ಮ ಜೀವನದಲ್ಲಿ ನಾವು ಕೂಡ ನಮ್ಮ ಸುತ್ತ ಮುತ್ತ ಇರುವವರಿಗೆ ಕೈಲಾದ ಮಟ್ಟಿಗೆ motivate ಮಾಡಿ, ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳುವ.


ಪ್ರೀತಿಯಿಂದ
ಗೌಡ.

No comments:

Post a Comment