ನನ್ನ ಇಲ್ಲಿಯವರೆಗಿನ ಜೀವನ ಕೇವಲ ಆಕಸ್ಮಿಕ ಘಟನೆಗಳ ಸರಮಾಲೆ, ನನ್ನ ಜೀವನದ ಕೆಲವು ಮುಖ್ಯವಾದ ಕೆಲವು ತಿರುವುಗಳು ಸರಿಯಾದ ಸಮಯದಲ್ಲಿ ಘಟಿಸದಿದ್ದರೆ, ನಾನು ಈ ದಿನ ಏನಾಗಿರ್ತೆದ್ದೆ ಅಂಥ ಊಹೆ ಮಾಡಿಕೊಳ್ಳಲು ಕೂಡ ಕಷ್ಟ ಹಾಗ್ತದೆ (ಬಹುಶಃ ಬೇಲೂರು ಕ್ಷೇತ್ರದ ಶಾಸಕ ಆಗಿರುತಿದ್ದೆ:-)). ಅಂಥ ಕೆಲವು ಘಟನೆಗಳ ಬಗ್ಗೆ ಬರೆಯುವ ಅಸೆ. ಇದನ್ನೆಲ್ಲಾ ನಾನು ಹೀರೋ ಅಂಥ ಜಂಭ ತೋರ್ಪಡಿಸಲು ಬರೆಯುತ್ತಿಲ್ಲ, ನಮ್ಮ ಜೀವನದಲ್ಲಿ ನೆಡೆಯುವ ಸಣ್ಣ ಸಣ್ಣ ಘಟನೆಗಳು ಎಷ್ಟು ಮಹತ್ವ ಪಡೆಯುತ್ತವೆ ಎಂದು ಹೇಳುವ ಪ್ರಯತ್ನ. I can see all those dots connecting perfectly in my life.
೮ನೇ ತರಗತಿಯನ್ನು ಹಳೇಬೀಡಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತಿದ್ದೆ. ನಮ್ಮೂರಿನಿಂದ ಹಳೇಬೀಡು ಸುಮಾರು ೫ ಕಿ ಮಿ, ದಿನಾಲು ಸೈಕಲ್ಲಿನಲ್ಲಿ ಹೋಗಿ ಬರುತಿದ್ದೆ. ಆ ವರ್ಷ ದ್ವಿತೀಯ ದರ್ಜೆಯಲ್ಲಿ (೩೧೦/೬೨೫) ಉತ್ತೀರ್ನನಾಗಿದ್ದು ನನ್ನ ದೊಡ್ಡ ಸಾಧನೆ, ಏಕೆಂದರೆ ಒಂದೇ ಒಂದು ದಿನ ಕೂಡ ಮನೆಯಲ್ಲಿ ಕೂತು ಓದಿರಲಿಲ್ಲ (ನಂಬಿದರೆ ನಂಬಿ, ಇದು ಸತ್ಯ!. ನನಗೆ ತಿಳಿದಿರೋ ಪ್ರಕಾರ, ನಾನು ೮ನೇ ತರಗತಿ ಮುಗಿಸಿದ್ದರು ಒಂದು ದಿನ ಕೂಡ ಮನೆಯಲ್ಲಿ ಕೂತು ಓದಿರಲಿಲ್ಲ, ನನಗೆ ಓದಬೇಕು ಅಂಥ ಕೂಡ ಯಾರು ಹೇಳಿರಲಿಲ್ಲ). ನಮ್ಮ ಶಾಲೆಯ ಒಟ್ಟು ೧೬೦ ವಿಧ್ಯಾರ್ಥಿಗಳಲ್ಲಿ, ಸುಮಾರು ೧೦ ಜನ ಪ್ರಥಮ ದರ್ಜೆ ಹಾಗು ಸುಮಾರು ೨೦ ಜನ ದ್ವೀತಿಯ ದರ್ಜೆಯಲ್ಲಿ ಪಾಸಾಗಿದ್ದರು, ಅವರುಗಳಲ್ಲಿ ನಾನೊಬ್ಬ ಆಗಿದ್ದರಿಂದ ನನ್ನ ಸಾಧನೆ ಬಗ್ಗೆ ನನಗೆ ತುಂಬ ಸಮಾಧಾನ ಇತ್ತು. ಮನೆಗೆ ಹೋಗಿ ಅವ್ವಂಗೆ ನಾನು ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದೇನೆ ಅಂಥ ಹೇಳಿದೆ, ನಮ್ಮಪ್ಪಂಗೆ ಅದನ್ನೆಲ್ಲಾ ಕೇಳುವುದಕ್ಕೆ ಸಮಯ ಇರಲಿಲ್ಲ. ನನ್ನ ಅವ್ವ ಹೋಗಿ ಊರಿನಲ್ಲಿರುವ ಪ್ರತಿಯೊಬ್ಬರಿಗೂ "ನನ್ಮಗ ಹಳೇಬೀಡಿಗೆ ಸೆಕೆಂಡ್ ಬಂದಿದ್ದಾನೆ!" ಅಂಥ ಎಲ್ಲಾರಿಗೂ ಹೆಮ್ಮೆಯಿಂದ ಹೇಳಿಕೊಂಡು ಬಂದಿದ್ದರು, ಅಂದು ನಮ್ಮ ಮನೆಯಲ್ಲಿ ಸುಮಾರು ೨೫ ಜನರಿಗೆ ಹಬ್ಬದೂಟ!.
೯ನೇ ತರಗತಿ ಶುರುವಾದ ಕೆಲವೇ ದಿನಗಳಲ್ಲಿ ಶಾಲೆಯಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಪದೇ ಇಬ್ಬರು ವಿಧ್ಯಾರ್ಥಿಗಳಿಗೆ "ಹೀರೋ" ಪೆನ್ನನ್ನು ಉಡುಗೊರೆಯಾಗಿ ಕೊಟ್ಟರು. ನಮ್ಮ ತರಗತಿಯಲ್ಲಿ ಪ್ರದೀಪ್ ಮತ್ತು ತಾರಮಣಿ ಎಂಬ ಇಬ್ಬರು ವಿಧ್ಯಾರ್ಥಿಗಳಿಗೆ ಸಿಕ್ಕಿತ್ತು.
ಆ ಸಮಯದಲ್ಲಿ ನಮ್ಮಪ್ಪ ನನಗೆ ವಾರಕ್ಕೆ ಕೊಡುತಿದ್ದ "ಪಾಕೆಟ್ ಮನಿ" ಕೇವಲ ಒಂದರಿಂದ ಐದು ರೂಪಾಯಿಗಳು, ಅದನ್ನು ಮೈಸೂರ್ ಪಾಕ್ ಅಥವಾ ಕಡ್ಲೆ ಮಿಠಾಯಿ ತಿಂದು ಮುಗಿಸಿ ಬಿದುತಿದ್ದೆ. ಆದರೆ ನನಗೆ ಹೀರೋ ಪೆನ್ ತಗೊಂಡು ಬರೀಬೇಕು ಅಂಥ ತುಂಬ ಆಸೆ ಇತ್ತು. ನಮ್ಮಪ್ಪನ್ನ ತುಂಬ ಸರತಿ ಕೇಳಿ ಸುಮ್ಮನಾಗಿದ್ದೆ ಮತ್ತು ಅಪ್ಪ ಕೊಡುತಿದ್ದ "ಪಾಕೆಟ್ ಮನಿ"ಯಲ್ಲಿ ಆ ಪೆನ್ ತಗೋಳೋದು ಸಾಧ್ಯ ಇರಲಿಲ್ಲ (ತುಂಬ ಸರತಿ ಹಣ ಕೂಡಿ ಹಾಕಲಿಕ್ಕೆ ತಿಂಗಳಗಟ್ಟಲೆ ಪ್ರಯತ್ನ ಮಾಡಿ, ಎಲ್ಲ ಹಣ ಕಳೆದು ಕೊಳ್ಳುತಿದ್ದೆ).
೯ನೆ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದರೆ ನನಗೆ ಕೂಡ ಹೀರೋ ಪೆನ್ನು ಸಿಗುತ್ತದೆ ಅಂಥ ಅಸೆ ಆಯಿತು. ನನಗೆ ತಿಳಿಯದೆ ನಾನು ಕೂಡ ಓದಿ ಅತಿ ಹೆಚ್ಚು ಅಂಕ ತೆಗೆಯಬೇಕು ಅಂಥ ತೀರ್ಮಾನ ಮಾಡಿಬಿಟ್ಟೆ. ಮನೆಗೆ ಹೋಗಿ ಅಪ್ಪನಿಗೆ ನಾನು ಹಾಸ್ಟೆಲ್ ಸೇರಿಕೊಳ್ಳುತ್ತೇನೆ, ದಿನ ಹೋಗಿ ಬರಲಿಕ್ಕೆ ಕಷ್ಟ ಆಗ್ತದೆ ಅಂಥ ಹೇಳಿದೆ. ನಮ್ಮ ಕ್ಷೇತ್ರದ MLA ಜೊತೆ ಮಾತಾಡಿ ಒಂದೇ ದಿನದಲ್ಲಿ ಹಾಸ್ಟೆಲ್ ಗೆ ಸೇರಿಸಿದರು. ಹಾಸ್ಟೆಲ್ ನಲ್ಲಿ ಸುಮಾರು ೫೦ ಜನರು ಒಂದು ದೊಡ್ಡ ಹಾಲಿನಲ್ಲಿ ಜೀವಿಸುತಿದ್ದೆವು. ಅಲ್ಲಿಯ ಊಟ ಉಡುಪಿಯ ಹೋಟೆಲ್ ಊಟಕ್ಕಿಂತ ಕೆಟ್ಟದಾಗಿರುತಿತ್ತು. ಮೊದ ಮೊದಲು ಹುಡುಗರೆಲ್ಲ ಪ್ರತಿ ರಾತ್ರಿ ಓದುವುದನ್ನು ನೋಡಿ ನನಗೆ ವಿಚಿತ್ರ ಅನ್ನಿಸಿತಿತ್ತು. ಆದರೆ ಹಾಸ್ಟೆಲ್ ಭಟ್ಟರ ಶಿಕ್ಷೆ ತಡೆಯಲಾಗದೆ ನಾನು ಕೂಡ ಓದಲು ಶುರು ಮಾಡಿದೆ. ಅಲ್ಲಿ ಇದ್ದ ತುಂಬ ವಿಧ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಹೋಗುತಿದ್ದರು, ಅವರುಗಳಿಗೆಲ್ಲ ಹೀರೋ ಪೆನ್ನಿನಲ್ಲಿ ಬರೋಯೋದು ಕಡ್ಡಾಯವಾಗಿತ್ತು. ನಾನು ಅವರ ಹತ್ತಿರ ಹೀರೋ ಪೆನ್ನನು ಕೇಳಿ ಪಡೆದು, ಅದರಲ್ಲಿ ಬರೆದು ನನ್ನ ಆಸೆ ತೀರಿಸಿಕೊಳ್ಳುತಿದ್ದೆ.
ಈಗೆ ಒಂದು ದಿನ ೯ನೆ ತರಗತಿಯ ಪಲಿತಾಂಶ ಕೂಡ ಬಂತು, ಹಾಗು ನನಗೆ ಆಶ್ಚರ್ಯ ಕಾದಿತ್ತು. ನಾನು ನಮ್ಮ ತರಗತಿಗೆ ಮೊದಲೆನೆಯವನಾಗಿ ಉತೀರ್ಣನಾಗಿದ್ದೆ (೪೪೯/೬೨೫)!!!. ಪ್ರತಿ ವರ್ಷದ ಹಾಗೆ ಆ ವರ್ಷ ಕೂಡ ಪ್ರತಿಭಾವಂತರಿಗೆ ಬಹುಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನಗೆ ಪ್ರಥಮ ಬಂದ ಖುಶಿಗಿಂತ, ಹೀರೋ ಪೆನ್ನಿಗಾಗಿ ಭಕಪಕ್ಷಿಯಂತೆ ಕಾಯುತಿದ್ದೆ. ಆದರೆ ನನ್ನ ದುರದೃಷ್ಟಕ್ಕೆ ಆ ವರ್ಷ ಹೀರೋ ಪೆನ್ನಿನ ಬದಲು ೫೦ ರೂಗಳನ್ನು ಹುಡುಗರೆಯಾಗಿ ಕೊಟ್ಟರು.
ನಾನು ಆ ಹಣವನ್ನು ನೇರವಾಗಿ ಮನಗೆ ತಗೊಂಡು ಹೋದೆ. ಅವ್ವನಿಗೆ ನಾನು ಈ ಹಣದಿಂದ ಹೀರೋ ಪೆನ್ನನ್ನು ತೆಗೆದು ಕೊಳ್ಳುತ್ತೇನೆ ಅಂಥ ಹೇಳಿದೆ, ಅದಕ್ಕೆ ಅವರು ಹಾಗೆ ಬಹುಮಾನವಾಗಿ ಸಿಕ್ಕಿದ ಹಣ ನಮ್ಮದಲ್ಲ, ಅದನ್ನು ನಾವು ಉಪಯೋಗಿಸಬಾರದು ಅಂಥ ಹೇಳಿ, ನನ್ನ ಕೈಯಿಂದ ನಮ್ಮೂರಿನ ದೇವಸ್ತಾನದ ಹುಂಡಿಗೆ ಹಾಕಿಸಿದರು!. ನನಗೆ ತುಂಬ ನಿರಾಸೆಯಾಗಿ ಅಳು ಬಂದು ಬಿಟ್ಟಿತು, ನಾನು ಅಳುವುದನ್ನು ನೋಡಿದ ಅವ್ವ, ಅಪ್ಪನಿಗೆ ಹೇಳಿ ಕೊನೆಗೂ ಒಂದು ಹೀರೋ ಪೆನ್ನು ಕೊಡಿಸಿದರು!. ನನ್ನ ಆಸೆ ಕೂಡ ತೀರಿತು.
ಶಾಲೆಯಲ್ಲಿ ಜರುಗುತಿದ್ದ ಕಾರ್ಯಕ್ರಮ ನನ್ನ ಜೀವನದ ಮೊದಲ ಮುಖ್ಯವಾದ ತಿರುವು, ಅದ್ದರಿಂದ ನನ್ನ ಶಾಲೆಯ ಶಿಕ್ಷಕರಿಗೆ ನಾನು ಸದಾ ಚಿರಋಣಿ. ಚಿಕ್ಕ ವಯಸ್ಸಿನ ಆ ಸಣ್ಣ ಸಣ್ಣ ಆಸೆಗಳು ತುಂಬ ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿಸುತ್ತವೆ. "ಜೀವನದಲ್ಲಿ ಯಾವುದೇ ಗುರಿ ಬೆನ್ನು ಹತ್ತಲು ಒಂದು ಸಣ್ಣ motivation ಅವಶ್ಯಕತೆ ಯಾವಾಗಲು ಇರುತ್ತದೆ". ಈಗೆ ನನ್ನ ಹಿಂದಿನ ಸಾದನೆಗಳನ್ನೆಲ್ಲ ಮೆಲುಕು ಹಾಕಿ ನನ್ನ ಮುಂದಿನ ಗುರಿ ಸಾದಿಸಲಿಕ್ಕೆ inspire ಮಾಡಿಕೊಳ್ಳುತಿದ್ದೇನೆ. ನಮ್ಮ ಜೀವನದಲ್ಲಿ ನಾವು ಕೂಡ ನಮ್ಮ ಸುತ್ತ ಮುತ್ತ ಇರುವವರಿಗೆ ಕೈಲಾದ ಮಟ್ಟಿಗೆ motivate ಮಾಡಿ, ನಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳುವ.
ಪ್ರೀತಿಯಿಂದ
ಗೌಡ.
Showing posts with label ಇತಿಹಾಸ. Show all posts
Showing posts with label ಇತಿಹಾಸ. Show all posts
Saturday, November 14, 2009
Wednesday, September 16, 2009
ಆಟ-ಹುಡುಗಾಟ
ಇತ್ತೀಚಿಗೆ ಒಮ್ಮೆ ಮಂಗಳೂರಿಗೆ ಯಾವುದೋ ಕಾರ್ಯದ ಮೇಲೆ ಹೋಗಿದ್ದಾಗ, ಸ್ನೇಹಿತರು "ಭರತ್ ಮಾಲ್" ಸುತ್ತಾಡುವ ಎಂದು ಕರೆದು ಕೊಂಡು ಹೋದರು. ಉಡುಪಿಗೆ ಬಂದು ೩+ ವರ್ಷಗಳಲ್ಲಿ ಪ್ರಥಮ ಬಾರಿಗೆ ಆ ಮಾಲ್ (ಮಾಲುಗಳ!!!) ವೀಕ್ಷಣೆಗೆಂದು ಅಲ್ಲಿಗೆ ಹೋಗಿದ್ದೆ. ಹೊಳಗೆ ಹೋದ ಸ್ವಲ್ಪ ಹೊತ್ತಿಗೆ, ನಾನು normal ಇದ್ದೇನಾ ಅನ್ನುವ ಸಂದೇಹಗಳು ನನ್ನಲ್ಲಿ ಮೂಡಲು ಶುರು ಮಾಡಿದವು. ಅಲ್ಲಿ ಬರುವವರ ಜೀವನ ವ್ಯವಸ್ಥೆ, ಅವರ ವೇಷ-ಭೂಷಣ, ಅವರ ಇಂಗ್ಲಿಷ್, ಎಳೆಯದೆ ಬೀಳಲಿಕ್ಕೆ ರೆಡಿ ಇರುವ ಪ್ಯಾಂಟುಗಳು, ಕರೆಂಟ್ ಹೊಡೆದ ಕಾಗೆ ಪುಕ್ಕದ ಹಾಗೆ ಇರೋ ತಲೆ ಕೂದಲು, ಉಬ್ಬು-ತಗ್ಗುಗಳೆನ್ನೇ ತೋರಿಸಲೆಂದು ಹಾಕಿದ್ದಾರೆ ಅನಿಸುವಂತಿರುವ ಹುಡುಗಿಯರ ವೇಷ, ಆ ಹುಡುಗಿಯರ ಬೆಕ್ಕಿನ ನಡಿಗೆ, ಅವರ iphone-iPod ಗಳು, ಆ ಸೇಲ್ಸ್ ಹುಡುಗಿಯರ ಯಾಂತ್ರಿಕ ನಗು, ಆ ವಸ್ತುಗಳ ಬೆಲೆ ನೋಡಿದರೆ ನೂರು ಪಟ್ಟು ದುಬಾರಿ. ಆಬ್ಭಾ, ನನಗೆ ಇದು ನಿಜವಾಗಿಯು ನಮ್ಮ ಕರ್ನಾಟಕವೇ ಎಂಬುವ ಅನುಮಾನ ಶುರುವಾಗಿತ್ತು. ನನಗೆ ಅಲ್ಲಿಂದ ಯಾವಾಗ ಹೊರಗೆ ಹೋಗುತ್ತೇನೆ ಅನ್ನಿಸುತಿತ್ತು. ಆದರೆ ಆ ವಿಷಯವನ್ನು ಸ್ನೇಹಿತರಿಗೆ ಹೇಳಿದರೆ ನನ್ನನ್ನು "not normal" ಅಂತಾ ನಿರ್ದರಿಸುತ್ತಾರೆ ಎಂದು ಸುಮ್ಮನೆ ಅವರೊಡನೆ ಸುತ್ತಾಡುತಿದ್ದೆ.
ಕೊನೆಗೆ ೩ನೆ ಹಂತಸ್ತಿಗೆ ತಲುಪಿದೆವು, ಅದು ಮಕ್ಕಳು ಆಟ ಆಡುವ ಜಾಗ - ಸ್ವಲ್ಪ normal ಅನ್ನಿಸುತಿತ್ತು. ಅಲ್ಲಿ ತುಂಬ ಜನ ಅಪ್ಪ ಅಮ್ಮಂದಿರು ಅವರ ಮಕ್ಕಳಿಗೆ ಆಟ ಆಡಿಸುತಿದ್ದರು. ಸ್ವಲ್ಪ ಸುತ್ತು ಹಾಕಿ ನೋಡಿದೆ, ಎಲ್ಲಾ ಕಂಪ್ಯೂಟರ್ ಆಟಗಳು. ಅವರ ಅಪ್ಪ ಅಮ್ಮಂದಿರು ಮಕ್ಕಳ ಖುಷಿಗಾಗಿ ಅಸ್ಟೊಂದು ಹಣ ಕರ್ಚು ಮಾಡುತಿರುವುದನ್ನು ನೋಡಿ ತುಂಬ ಖುಶಿ ಆಯಿತು. ಮತ್ತೆ ಕೆಳೆಗೆ ಬಂದು ಇನ್ನೊಮ್ಮೆ ಮಾಲ್ ಗಳ ವೀಕ್ಷಣೆ ಮಾಡಿಕೊಂಡು, ಕಣ್ಣನ್ನೆಲ್ಲಾ ಸ್ವಲ್ಪ ತಂಪು ಮಾಡಿಕೊಂಡು ಹೊರಗಡೆ ಬಂದೆವು. ಅಲ್ಲಿ ಏನಾದರು ವ್ಯಾಪಾರ ಮಾಡುವಸ್ಟು ಹಣ ನಮ್ಮ ಬಳಿ ಇರಲಿಲ್ಲ. ಹೊರಗಡೆ ಬಂದು ನನ್ನ ಸುತ್ತ ಮುತ್ತ ಇರುವ ಜನರನ್ನು ನೋಡಿ ತುಂಬ ಮನಸ್ಸಿಗೆ ಸಮಾಧಾನ ಆಯಿತು, ಜೊತೆಗೆ ಒಂದು KSRTC ಬಸ್ ನೋಡಿ ಇದು ಕರ್ನಾಟಕವೇ ಎಂದು ಮನದಟ್ಟಾಯಿತು.
ಅಲ್ಲಿಂದ ಬಂದು ಉಡುಪಿ ಬಸ್ ಹತ್ತಿ ಪ್ರಯಾಣ ಶುರು ಮಾಡಿದೆವು, ಆಗ ನನ್ನ ಮನಸ್ಸಿನಲ್ಲಿ ಒಂದು ಯೋಚನೆ ಕೊರೆಯಲಿಕ್ಕೆ ಶುರು ಮಾಡಿತು - ನಾನು ಚಿಕ್ಕವನಾಗಿದ್ದಾಗ ಯಾವ ಯಾವ ಆಟಗಳನ್ನು ಆಡುತಿದ್ದೆ?, ನನ್ನ ಅಪ್ಪ-ಅಮ್ಮ ಎಷ್ಟು ಹಣ ಖರ್ಚು ಮಾಡುತಿದ್ದರು? ನಾವು ಕೂಡ ಈ ಮಕ್ಕಳ ಹಾಗೆ ನನ್ನ ಬಾಲ್ಯವನ್ನು ಎಂಜಾಯ್ ಮಾಡಿದ್ದೇನಾ?
ನನಗೆ ತಿಳಿದಿರುವ ಹಾಗೆ ನನ್ನ ಅಪ್ಪ-ಅಮ್ಮ ನನ್ನ ಆಟಕ್ಕಾಗಿ ಒಂದು ಬಿಡಿಗಾಸು ಕೂಡ ಖರ್ಚು ಮಾಡಿಲ್ಲ. ನಾವು ಆಡುತಿದ್ದ ಆಟಗಳಿಗೆ ಯಾವುದೇ ಹಣದ ಅವಶ್ಯಕತೆ ಇರಲಿಲ್ಲ. ಯಾವುದೇ ಯಂತ್ರದ ಮೇಲೆ ಅವಲಂಬಿತವಾಗಿರಲಿಲ್ಲ. ನಮ್ಮ ಅಪ್ಪ ಅಮ್ಮ ಯಾವತ್ತು ನಮಗೆ ಆಟ ಅಡಿಸಲಿಕ್ಕೆ ಬರುತ್ತಿರಲಿಲ್ಲ, ರೈತರಾದ ಅವರಿಗೆ ಸಮಯವೇ ಇರುತ್ತಿರಲಿಲ್ಲ. ನಮ್ಮೂರಿನ ಸ್ಥಿತಿ ಈಗಲೂ ಹಾಗೆ ಇದೆ. ನಾವುಗಳು ಆಡುತಿದ್ದ ಆಟಗಳೆಂದರೆ ಬುಗರಿ (ಬಗರಿ), ಗಿಲ್ಲಿ-ದಾಂಡು, ಟಿಕ್ಕಿ, ಕೋಲಾಟ, ಕಳ್ಳ-ಪೋಲಿಸ್, ಕಣ್ಣಾ-ಮುಚ್ಚಾಲೆ, ಚೌಕಾಬರೆ, ಕುಂಟೆ-ಬಿಲ್ಲೆ, ಕಬಡ್ಡಿ, ಮರಕೋತಿ, ಈಜು, ಹಾಗು ಇತರೆ ಸಣ್ಣ ಪುಟ್ಟ ಆಟಗಳು. ನಮಗೆ ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್ ಅಂತೆಲ್ಲಾ ಆಟಗಳು ಇದೆ ಅಂಥ ಕೂಡ ಗೊತ್ತಿರಲಿಲ್ಲ, ನನ್ನ ಜೀವನದಲ್ಲಿ ಕ್ರಿಕೆಟ್ ಅಂಥ ಆಟ ಇದೆ ಅಂಥ ತಿಳಿದದ್ದು ಎಂಟನೆ ತರಗತಿಯಲ್ಲಿ ಹಾಗು ಪುಟ್ಬಾಲ್, ಟೆನ್ನಿಸ್ ಬಗ್ಗೆ ತಿಳಿದದ್ದು puc ಯಲ್ಲಿ. ಎತ್ತಿನ ಗಾಡಿಯಲ್ಲಿ ಕೂತು (ಎಮ್ಮೆಯ ಮೇಲೆ ಕೂತು) ರಿಯಲ್ ರೇಸ್ ಮಾಡಿ ಅಭ್ಯಾಸ ಇತ್ತೇ ಹೊರೆತು, ಯಾವುದೇ ಕಂಪ್ಯೂಟರ್ ಕಾರ್ ರೇಸ್ ಬಗ್ಗೆ ಗೊತ್ತಿರಲಿಲ್ಲ. ಯಾವುದೇ ಬೋಟಿಂಗ್ ಮಾಡಿ ಗೊತ್ತಿಲ್ಲದಿದ್ದರೂ ಎಮ್ಮೆ ಅಥವಾ ಎತ್ತಿನ ಮೇಲೆ ಕೂತು (ಈಜು ಬಾರದೆ ಇದ್ದರು, ಕೆಲವೊಮ್ಮೆ ಎಮ್ಮೆಯ ಬಾಲ ಹಿಡಿದುಕೊಂಡು) ಆಳವಾದ ಕೆರೆಯಲ್ಲೆಲ್ಲಾ ಸವಾರಿ ಮಾಡಿದ ಅನುಭವ ಇದೆ.
ಮೇಲಿನ ಯಾವುದೇ ಆಟಗಳಿಗೆ ಹಣದ ಅವಶ್ಯಕತೆ ಇರಲಿಲ್ಲ. ಬುಗರಿ ಹಾಗು ಗಿಲ್ಲಿ-ದಾಂಡು ಆಟದಲ್ಲಿ ನಾನು ನಮ್ಮೂರಿನ ಚಾಂಪಿಯನ್. ನಮ್ಮೂರಿನ ಪ್ರತಿಯೊಬ್ಬ ಹೆಂಗಸರು ಹಾಗು ಅಜ್ಜಂದಿರು ನನಗೆ ಬೈದಿದ್ದಾರೆ ಏಕೆಂದರೆ ಪ್ರತಿಯೊಬ್ಬರ ಮನೆ ಹೆಂಚಿಗು ಚಿನ್ನಿ (ಮರದ ತುಂಡು)ಯಿಂದ ಹೊಡೆದು ತೂತು ಮಾಡಿರುತಿದ್ದೆ. ಇನ್ನು ಟಿಕ್ಕಿ ಆಟ ಊರಿನ ಬೀದಿಯಲ್ಲಿ ಬಿದ್ದಿರುವ ಸಿಗರೇಟು ಪ್ಯಾಕೇಟು ಹಾಗು ಬೆಂಕಿ ಪೊಟ್ಟಣದ ತುಂಡುಗಳಿಂದ ಆಡುತಿದ್ದ ಆಟ. ಕಳ್ಳ-ಪೋಲಿಸ್ ಆಟ ಒಂದು ಭಯಾನಕ ಆಟ, ಏಕೆಂದರೆ ಈ ಆಟದಲ್ಲಿ ಕಳ್ಳ ಆದವರು ಊರಿನ ಯಾವುದೇ ಮನೆಗೆ ಹೋಗಿ ಅವಿತುಕೊಳ್ಳಬಹುದಿತ್ತು, ಪೋಲಿಸ್ ಆದವನು ಊರಿನ ಎಲ್ಲಾ ಮನೆಗಳನ್ನು ಹುಡುಕಬೇಕಿತ್ತು - ಕೆಲವೊಮ್ಮೆ ಒಂದೊಂದು ದಿನ ಹುಡುಕುವುದರಲ್ಲೇ ಕಳೆದು ಹೋಗುತಿತ್ತು. ಚೌಕಾಬರೆ ಆಟ, ಇದು ಚೆಸ್ ವಿಧವಾದ ಆಟ ಅಂಥ ಹೇಳಬಹುದು, ತುಂಬ ಚತುರತೆಯಿಂದ ಆಡಬೇಕಾದ ಆಟ - ಇದಕ್ಕೆ ಬೇಕಾದ ಕವಡೆಗಳನ್ನು ನಾವು ಹುಣಸೆ ಬೀಜದ ಒಂದು ಭಾಗವನ್ನು ತೆವೆದು ಬೆಳ್ಳಗೆ ಮಾಡಿಕೊಂಡು ಅವುಗಳಲ್ಲಿ ಆಡುತಿದ್ದೆವು. ಮರಕೋತಿ ಆಟವನ್ನು ಆಡಲಿಕ್ಕೆ ಹೋಗಿ ತುಂಬ ಸಲ ಕೈ ಕಾಲಿಗೆ ಪೆಟ್ಟು ಮಾಡಿಕೊಳ್ಳುತಿದ್ದೆವು. ಕಬಡ್ಡಿ ಹಾಗು ಈಜು ಸ್ವಲ್ಪ ದೊಡ್ಡವರಾದ ಮೇಲೆ ಆಡಲಿಕ್ಕೆ ಶುರು ಮಾಡಿದ ಆಟಗಳು, ಜೊತೆಗೆ ತುಂಬ ಎಂಜಾಯ್ ಮಾಡಿದ ಆಟಗಳು. ಇವತ್ತಿಗೂ ನಮ್ಮೂರಿನ ಕೆರೆಯ ಹತ್ತಿರ ಹೋದರೆ ಡೈವ್ ಹೊಡೆಯುವ ಅಂಥ ಅನ್ನಿಸುತ್ತದೆ.
ಈಗಿನ ಪಟ್ಟಣದಲ್ಲಿ ಜೀವನ ಮಾಡುವವರು ಎಷ್ಟೇ ಹಣ ಖರ್ಚು ಮಾಡಿದರು, ನಮ್ಮಂಥ ಹಳ್ಳಿ ಹುಡುಗರ ಹಾಗೆ ಜೀವನವನ್ನು ಸವಿಯಲು ಸಾಧ್ಯ ಇಲ್ಲಾ, ಅದು ಯಾವುದೇ ರೀತಿಯಲ್ಲೂ ಹಣ ವ್ಯಯ ಮಾಡದೆ. ಈ ಎಲ್ಲಾ ಆಟಗಳ ಜೊತೆಗೆ ಬೇರೆ ತುಂಟಾಟಗಳನ್ನೂ ಮಾಡುತಿದ್ದೆವು ಅವುಗಳ ಬಗ್ಗೆ ಮತ್ತೊಮ್ಮೆ ಸಮಯ ಸಿಕ್ಕಾಗ ಬರೆಯುತ್ತೇನೆ.

Subscribe to:
Posts (Atom)