Monday, July 18, 2011

ಪ್ರತೀಕ್ಷೆ

ಒಲಮೆಯ ಒಡಯನೆ ಒಲಿದು ನೋಡು ಒಮ್ಮೆ ನೀನೆನಗೆ
ಒಡನೆಯೇ ನನ್ನನ್ನೇ ಉಡುಗೊರೆಯಾಗಿಸುವೆ ನಾನಿನಗೆ 
ಪ್ರತಿದಿನ ಕವಿಕಲ್ಪನೆಯಲೆ ಕೆತ್ತಿದ ರೂಪದ ಹೊದಿಕೆ ಹೊದ್ದು
ಕಂಡರೂ ಕಾಣದಂತೆ ಬಂದು ಎದೆಗೂಡೊಳಗೆ ನೆಲೆಸು ಬಾರೊ

ಕನಸಿನ ಮೋಡಗಳ ಹೊತ್ತು ಇನ್ನೂ ಸುಮ್ಮನೆ ಏಕೆ ನಿಂತಿರುವೆ
ನಿನ್ನೊಲವ ಮಳೆಗೆಂದೇ ಕಾದಿರುವೆನಗೆ ಹೀಗೆ ಎಷ್ಟು ಕಾಯಿಸುವೆ
ನನ್ನೆದೆಯ ಬರಿದಾದ ಪುಟ್ಟ ಹೃದಯಕೊಳವ ಒಮ್ಮೆ ಭರಿಸಿ
ಬಾಳಬನದಿ ಹಸಿರ ಚಿಗುರಿಸಲು ಜೀವಜಲ ಸುರಿಸು ಬಾರೊ

ಬೇಕಿದೆ ಪ್ರಥಮ ಚುಂಬನಾತಿಥ್ಯದೊಡನೆ ಗಡ್ಡದ ಕಚಗುಳಿ
ಜೊತೆಗೆ ಚಳಿಯ ನೆಪಹೂಡಿ ಬಂಧಿಸುವ ಆ ಹುಸಿ ಕಳಕಳಿ
ಎಲ್ಲಾ ತಾಪತ್ರಯ ಮರೆತು ಮಲಗಿ ನಿನ್ನೆದೆಬಡಿತ ಆಲಿಸೊ ಕನಸ
ಯಾವ ತಕರಾರು ಮಾಡದೆ ಈಗಲೆ ಸಾಕಾರಗೊಳಿಸು ಬಾರೊ

ನೂರೆಂಟು ತುಂಟಾಟಗಳ ಆಡಿ ಬೇಕಂತಲೆ ತುಸು ರೇಗಿಸಿ
ಹದಿನೆಂಟು ಬೇಸಿಗೆಗಳ ಬೇಗೆಯ ನಾನಿಂತಲ್ಲೆ ಅಸು ನೀಗಿಸಿ
ನನ್ನ ಮನದೆಲ್ಲಾ ಮೂಲೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಮಲಗಿರುವ
ಎಲ್ಲ ಭಾವಗೀತೆಗಳಿಗಿಂದು ಜೀವರಾಗ ನೀಡಿ ನುಡಿಸು ಬಾರೊ

ಸಂಜೆಹೊತ್ತಲಿ ಸುರಿಯುವ ಸೋನೆ ಮಳೆಯಲಿ ಮಿಂದು
ಕಾಡುಹಾದಿಲಿ ಕಾರಣವಿಲ್ಲದೆ ನಾವಿಬ್ಬರೇ ನಡೆದು ಬಂದು
ಯಾರದು ಕ್ಯಾತೆ ಇರದಲ್ಲಿ ಯಾವುದೆ ಕ್ಯಾಮೆ ಇಲ್ಲದೆ ಕುಳಿತು
ಎಂದೂ ಮರೆಯದಂಥ ಪದವ ಕಟ್ಟಿ ಮೈಮರೆತು ಹಾಡುವ ಬಾರೊ

8 comments:

  1. Gowdre,

    neevu tumbha rasikaru :)

    Kavana chennagi bandide

    ReplyDelete
  2. @KP: Thanks a lot for both compliments ;)

    ReplyDelete
  3. ಪ್ರೀತಿಯ ಗೌಡರೆ

    ಕೆ. ಪಿ ಅವರ ಅನಿಸಿಕೆ ಸರಿಯಾಗಿದೆ. ಸುಮ್ನೆ ಭಾವನೆಗಳಿಲ್ಲದೆ ಕವನ ಮೂಡುವುದಿಲ್ಲ. ಅಂದ ಹಾಗೆ ಈ ಕವಿತೆಯ ಭಾವಾರ್ಥ ಏನು ಎಂದು ಅರಿಯಲು ಪ್ರಯತ್ನಿಸುತ್ತಿದ್ದೆ. ಯಾವುದರ ಅಥವಾ ಯಾರ ಪ್ರತೀಕ್ಷೆಯನ್ನು (ಪ್ರತೀಕ್ಷಾಳ ಪ್ರತೀಕ್ಷೆ) ಮಾಡುತ್ತಿರುವಿರೋ ನಾ ಕಾಣೆ... :) :) ಹೀಗೆ ಅನ್ಯಥಾ ಅರಿಯಬಾರದೆಂದು ಸುಮ್ಮನೆ 'ಬಾರೆ' ಬದಲಿಗೆ 'ಬಾರೋ' ಎಂದು ಬರೆದಿರುವಿರೋ, ನಾ ಕಾಣೆ :P

    ಏನೇ ಇರಲಿ, ನಿಮ್ಮ ಪ್ರತೀಕ್ಷೆ ಅತೀ ಶೀಘ್ರದಲ್ಲೇ ಮುಗಿದು, ನೀವು ಯಾವುದನ್ನ ಹುದುಕುತ್ತಿರುವಿರೋ, 'ಅದು' ಅಥವಾ 'ಅವಳು' ನಿಮಗೆ ಸಿಗಲಿ ಎಂದು ಹಾರೈಸುವೆ. :)

    ಇನ್ನು ಕವನದ ಬಗ್ಗೆ ಏನು ಹೇಳಲಿ.. ಸುಂದರವಾಗಿ ಮೂಡಿ ಬಂದಿದೆ.

    ಇಂತಿ
    ಸುನೀಲ್

    ReplyDelete
  4. ಪಡಿಯಾರ್: ಏನಿಲ್ಲ ಕಣೋ, ಸುಮ್ನೆ ಒಂದು female-version ಗದ್ದಲ ಬರೆಯುವ ಅಂತ ತುಂಬ ಆಸೆ ಇತ್ತು, ಅದಕ್ಕೆ ಸುಮ್ನೆ ಒಂದು ಪ್ರಯತ್ನ ಮಾಡಿದೆ ಅಷ್ಟೇ.

    ಗದ್ದಲ ಇಷ್ಟ ಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು!

    // ತೋಟೆ ಗೌಡ

    ReplyDelete
  5. The feelings of a gals heart have flown in beautifully here.
    Her dream boy, her thoughts, her imaginations.. you have expressed all of them very nicely. Esp the last 3 paras.. loved them.

    Sweet and light romantic!!!

    ReplyDelete
  6. ತುಂಬಾ ಚೆನ್ನಾಗಿದೆ..

    ReplyDelete